ಕೀವ್: ಉಕ್ರೇನ್ ಮೇಲಿನ ರಷ್ಯಾ ಯುದ್ಧ 5ನೇ ದಿನವು ಮುಂದುವರೆದಿದೆ. ರಣಾಂಗಣವಾಗಿರುವ ಉಕ್ರೇನ್ ನಲ್ಲಿ ರಷ್ಯಾಸೇನೆ ಜನರ ಮಾರಣಹೋಮ ನಡೆಸಿದೆ. ಮಾತುಕತೆಗೆ ಉಕ್ರೇನ್ ಒಪ್ಪಿದ್ದಾಗ್ಯೂ ರಷ್ಯಾ ತನ್ನ ಆಕ್ರಮಣಕಾರಿ ದಾಳಿ ಮುಂದುವರೆಸಿದೆ.
ರಷ್ಯಾ ದಾಳಿಗೆ ಉಕ್ರೇನ್ ನ 14 ಮಕ್ಕಳು ಸೇರಿ 352 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 116 ಮಕ್ಕಳು ಸೇರಿ 1,684 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಉಕ್ರೇನ್ ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.
ಬಲವಂತವಾಗಿ ಬೆತ್ತಲೆ ಫೋಟೋ ತೆಗೆದು ಪತ್ನಿಗೆ ಉದ್ಯಮಿ ಬ್ಲಾಕ್ಮೇಲ್
ಈ ನಡುವೆ ರಷ್ಯಾ ಉಕ್ರೇನ್ ನ ಝೈಟೋಮಿರ್ ಏರ್ ಪೋರ್ಟ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ರಾಜಧಾನಿ ಕೀವ್ ನಗರದಲ್ಲಿಯೂ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ಕೀವ್ ನಗರದಲ್ಲಿ ಸಿಲುಕಿರುವ ಭಾರತೀಯರು ತೊಂದರೆಗೆ ಸಿಲುಕಿದ್ದಾರೆ.
ಇಂದು ಬೆಲಾರಸ್ ನಲ್ಲಿ ಉಕ್ರೇನ್ ಹಾಗೂ ರಷ್ಯಾ ನಡುವೆ ಮಾತುಕತೆ ನಡೆಯುವ ಸಾಧ್ಯತೆ ಇದ್ದು, ಯುದ್ಧ ಅಂತ್ಯವಾಗುವ ಸಾಧ್ಯತೆ ಬಗ್ಗೆ ನಿರೀಕ್ಷಿಸಲಾಗಿದೆ.