ಕೀವ್; ಉಕ್ರೇನ್ ನಲ್ಲಿ ರಷ್ಯಾ ಸೇನೆ ಮಾರಣ ಹೋಮ ಮುಂದುವರೆಸಿದೆ. ಆಸ್ಪತ್ರೆ, ಜನವಸತಿ ಪ್ರದೇಶಗಳ ಮೇಲೆ ಭೀಕರ ಶೆಲ್ ದಾಳಿ ನಡೆಸಿದೆ. ಈ ನಡುವೆ ಮರಿಯಪೋಲ್ ನಲ್ಲಿ ರಷ್ಯಾ ನಡೆಸಿದ ದಾಳಿಗೆ 1500 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮರಿಯಪೋಲ್ ನಲ್ಲಿ ಕಳೆದ 12 ದಿನಗಳ ರಷ್ಯಾ ದಾಳಿಯಲ್ಲಿ 1500 ಜನರು ಸಾವನ್ನಪ್ಪಿದ್ದು, ನಿರಾಶ್ರಿತರಾಗಿರುವ ಜನರಿಗೆ ಆಹಾರ, ನೀರು ಒದಗಿಸುವುದು ಕಷ್ಟಕರವಾಗಿದೆ ಎಂದು ಮರಿಯಪೋಲ್ ಮೇಯರ್ ಕಚೇರಿ ತಿಳಿಸಿದೆ.
ಇನ್ನೊಂದೆಡೆ ರಷ್ಯಾ ಸೇನೆ ಉಕ್ರೇನ್ ನ ಮೈಕೋಲೈವ್ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದು, ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ. ಉಕ್ರೇನ್ ನ ಲುಟ್ಸ್ಕ್, ಇವಾನೊ-ಫ್ರಾಂಕಿವ್ಸ್ ನಗರಳ ಮೇಲೆ ವಾಯು ದಾಳಿ ನಡೆಸಿದ್ದು, ರಾಜಧಾನಿ ಕೀವ್ ನಗರವನ್ನು ರಷ್ಯಾ ಸೇನೆ ಸುತ್ತುವರೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಕರಡಿ – ಹುಲಿಯ ಜುಗಲ್ಬಂಧಿ..!
ಉಕ್ರೇನ್ ನಿಂದ ನಿನ್ನೆ ಒಂದೇ ದಿನದಲ್ಲಿ 7,144 ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಉಕ್ರೇನ್ ಅಕ್ಷರಶಃ ಸ್ಮಶಾನವಾಗಿದ್ದು, ಎಲ್ಲೆಲ್ಲೂ ಹೆಣಗಳ ರಾಶಿ, ಜನರ ಆಕ್ರಂದನ, ಬಾಂಬ್ ದಾಳಿ, ಆಹಾರ, ನೀರಿಗಾಗಿ ಪರದಾಟ ರಣಭೀಕರತೆಯ ದೃಶ್ಯಗಳೆ ಕಂಡುಬರುತ್ತಿವೆ.