alex Certify ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಕರಡಿ – ಹುಲಿಯ ಜುಗಲ್​ಬಂಧಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಕರಡಿ – ಹುಲಿಯ ಜುಗಲ್​ಬಂಧಿ..!

ಆ್ಯನಿಮೇಟೆಡ್​ ಡಿಸ್ನಿ ಚಲನಚಿತ್ರ ದಿ ಜಂಗಲ್​ ಬುಕ್​ನಲ್ಲಿ ಕರಡಿ ಹಾಗೂ ಹುಲಿಯ ಸ್ನೇಹವನ್ನು ಬಹಳ ಸುಂದರವಾಗಿ ತೋರಿಸಲಾಗಿತ್ತು. ಇದೇ ರೀತಿಯ ದೃಶ್ಯವನ್ನು ಮರುಸೃಷ್ಟಿಸುವಂತೆ ಕಾಣುತ್ತಿರುವ ವಿಡಿಯೋವೊಂದು ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಈ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸಾಕೇತ್​ ಬಡೋಲಾ ಎಂಬವರು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಮಹಾರಾಷ್ಟ್ರದ ತಡೋಬಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಮನ್​ ಅರ್ಗವಾಲ್​ ಎಂಬವರು ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ.

ಈ ವಿಡಿಯೋದಲ್ಲಿ ಹುಲಿ ಹಾಗೂ ಕರಡಿ ಮುಖಾಮುಖಿಯಾಗೋದನ್ನು ಕಾಣಬಹುದಾಗಿದೆ. ಕಾಡಿನ ದಾರಿಯ ಮಧ್ಯದಲ್ಲಿ ಹುಲಿ ಕೂತಿದ್ದರೆ ಅದೇ ದಾರಿಯಲ್ಲಿ ಬಂದ ದೊಡ್ಡ ಕರಡಿಯು ಹುಲಿಯನ್ನು ಹೆದರಿಸಲು ಯತ್ನಿಸಿದೆ. ಹುಲಿ ಕೊಂಚ ಕೊಸರಿದ್ದನ್ನು ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮಗೆ ಕಾರ್ಟೂನ್​​ ಪಾತ್ರಧಾರಿಗಳಾದ ಬಾಲೂ ಹಾಗೂ ಶೇರ್ ಖಾನ್​ನ್ನು ನೆನಪಿಸಿದೆ ಎಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...