ಕೀವ್: ಉಕ್ರೇನ್ ಮೇಲೆ ರಷ್ಯಾ ಸೇನೆ ಮತ್ತಷ್ಟು ದಾಳಿ ತೀವ್ರಗೊಳಿಸಿದ್ದು, ಉಭಯ ದೇಶಗಳ ನಡುವಿನ ಯುದ್ಧ ಇಂದು 14ನೇ ದಿನಕ್ಕೆ ಕಾಲಿಟ್ಟಿದೆ. ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ರಷ್ಯಾ ಕ್ಷಿಪಣಿ ದಾಳಿ ಮುಂದುವರೆಸಿದೆ. ಈ ನಡುವೆ ಉಕ್ರೇನ್ ನ ಪ್ರಮುಖ ನಗರಗಳ ಮೇಲೆ ಏಕಕಾಲಕ್ಕೆ ರಷ್ಯಾದ 40 ಮಿಸೈಲ್ ಗಳು ದಾಳಿ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಷ್ಯಾದ ಯುದ್ಧ ಟ್ಯಾಂಕರ್ ನಿಂದ ಒಂದರ ಹಿಂದೊಂದರಂತೆ 40 ಮಿಸೈಲ್ ಗಳು ದಾಳಿ ನಡೆಸಿದ ದೃಶ್ಯ ಬೆಚ್ಚಿ ಬೀಳಿಸುವಂತಿದ್ದು, ಯುದ್ಧದ ಭೀಕರತೆಯನ್ನು ಸಾರಿ ಹೇಳುವಂತಿದೆ. ಇನ್ನು ಉಕ್ರೇನ್ ನ ವಿನ್ನಿಟ್ಸಿಯಾದ ಮೇಲೆ ರಷ್ಯಾ ಸೇನೆ ವಾಯು ದಾಳಿ ನಡೆಸಿದ್ದು, ನಾಗರಿಕರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.
ಮ್ಯಾಗಜೀನ್ ಕವರ್ ಗೆ ರಶ್ಮಿಕಾ ಮಂದಣ್ಣ ಬೋಲ್ಡ್ ಪೋಸ್; ಶ್ರೀವಲ್ಲಿ ಲುಕ್ ಗೆ ಬೆರಗಾದ ಅಭಿಮಾನಿಗಳು
ಮತ್ತೊಂದೆಡೆ ಉಕ್ರೇನ್ ನ ಝೈಟೊಮಿರ್, ಖಾರ್ಕಿವ್ ನ ಜನವಸತಿ ಪ್ರದೇಶಗಳ ಮೇಲೆ ರಷ್ಯಾಪಡೆ ದಾಳಿ ಮುಂದುವರೆಸಿದ್ದು, ಮೂವರು ಮಕ್ಕಳು ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ.
ಉಕ್ರೇನ್ ನ ಕೀವ್, ಖಾರ್ಕೀವ್ ವಿನಯಟಷಿಯಾ, ವಸಿಲಕಿವ್ ಮೇಲೆ ವಾಯು ದಾಳಿ ನಡೆಯುತ್ತಿದ್ದು, ಉಕ್ರೇನ್ ಸರ್ಕಾರ ಜನರಿಗೆ ಬಂಕರ್, ಮನೆಗಳಲ್ಲಿ ಆಶ್ರಯ ಪಡೆಯುವಂತೆ ಸೂಚನೆ ನೀಡಿದೆ.