alex Certify ಮೈ ಚಳಿ ಬಿಟ್ಟು ಬೋಲ್ಡ್‌ ಅವತಾರದಲ್ಲಿ ʼಮ್ಯಾಗಜೀನ್ʼ ಕವರ್‌ ಗೆ ಪೋಸ್‌ ಕೊಟ್ಟ ರಶ್ಮಿಕಾ ಮಂದಣ್ಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈ ಚಳಿ ಬಿಟ್ಟು ಬೋಲ್ಡ್‌ ಅವತಾರದಲ್ಲಿ ʼಮ್ಯಾಗಜೀನ್ʼ ಕವರ್‌ ಗೆ ಪೋಸ್‌ ಕೊಟ್ಟ ರಶ್ಮಿಕಾ ಮಂದಣ್ಣ….!

ತನ್ನ ಕ್ಯೂಟ್ ಲುಕ್ ನಿಂದಲೇ ಎಲ್ಲರನ್ನು ಬೆರಗುಗೊಳಿಸುವ ನಟಿ ರಶ್ಮಿಕಾ ಮಂದಣ್ಣ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಜರ್ನಿ‌ ಶುರುಮಾಡಿರುವ ಮಂದಣ್ಣ, ಹಲವು ಸ್ಟ್ರಾಂಗ್ ಹಾಗೂ ಪ್ರಭಾವಶಾಲಿ ಪಾತ್ರಗಳಿಗೆ ಜೀವ ತುಂಬಿದ್ದಾರೆ‌.

ಇತ್ತೀಚೆಗೆ ರಶ್ಮಿಕಾ ಹಲೋ ಇಂಡಿಯಾ ಎನ್ನುವ ಮ್ಯಾಗಜೀನ್ ಕವರ್ ಶೂಟ್ ಮಾಡಿದ್ದು, ಆಕೆಯ ಲುಕ್ ನೋಡಿದ ಫ್ಯಾನ್ಸ್ ಮಂತ್ರಮುಗ್ಧಾರಾಗಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮ್ಯಾಗಜೀನ್ ಕವರ್ ಚಿತ್ರವನ್ನು ಬಿಡುಗಡೆ ಮಾಡಿದ್ದು, ರ್ಯಾವಿಶಿಂಗ್ ರಶ್ಮಿಕಾ, ಬಾಲಿವುಡ್‌ನಲ್ಲಿ ಆಳ್ವಿಕೆ ನಡೆಸಲು ತಯಾರಾಗಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.

BREAKING: ಆಭರಣ ಪ್ರಿಯರಿಗೆ ಬಿಗ್‌ ಶಾಕ್; 18 ತಿಂಗಳಲ್ಲಿ ಮೊದಲ ಬಾರಿ 55,000 ರೂ. ಗಡಿ ದಾಟಿದ ಹಳದಿ ಲೋಹ…!

ಪ್ಯಾನ್ ಇಂಡಿಯಾ ತಾರೆ ರಶ್ಮಿಕಾ, ಕವರ್‌ಗಾಗಿ ಮೋಡಿ ಮಾಡುವ‌ ಲುಕ್ ನಲ್ಲಿ ಮಿಂಚಿದ್ದಾರೆ. ಮಿನುಗುವ ಆಲಿವ್ ಹಸಿರು ಬಣ್ಣದ ಜಂಪ್‌ಸೂಟ್ ಧರಿಸಿ, ಅದಕ್ಕೆ ತಕ್ಕ ಆಭರಣಗಳು ಹಾಗೂ ಗ್ಲಾಮ್ ಮೇಕಪ್ನೊಂದಿಗೆ ಬೋಲ್ಡ್ ಪೋಸ್ ನೀಡಿ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದ್ದಾರೆ.

ಇತರ ಚಿತ್ರಗಳ ಸೆಟ್‌ಗಳಲ್ಲಿಯೂ ಸಹ, ಮಂದಣ್ಣ ಗ್ಲಿಟ್ಜ್ ಮತ್ತು ಗ್ಲಾಮ್ ಗೆ ಪರ್ಯಾಯ ತಾನೇ ಎನ್ನುವ ಹಾಗೇ ಮಿಂಚಿದ್ದಾರೆ. ರಶ್ಮಿಕಾ, ಶ್ರೀವಲ್ಲಿ ಪಾತ್ರದ ಮೂಲಕ ಮಾಡಿರುವ ಮೋಡಿಯನ್ನು ಜನ ಇನ್ನು ಮರೆತಿಲ್ಲಾ. ಹೀಗಿರುವಾಗ ಕಿರಿಕ್ ಸುಂದರಿ ಸಿದ್ಧಾರ್ಥ್ ಮಲ್ಹೋತ್ರ ಜೋಡಿಯಾಗಿ ಮಿಷನ್ ಮಜ್ನು ಮೂಲಕ ಬಿಟೌನ್ ಗೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...