ಕೀವ್: ಉಕ್ರೇನ್ ಮೇಲಿನ ತನ್ನ ದಾಳಿಯನ್ನು ಮುಂದುವರೆಸಿರುವ ರಷ್ಯಾ, ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿಗೆ ಮಾತುಕತೆಗೆ ಬರುವಂತೆ ಆಹ್ವಾನ ನೀಡಿದ್ದು, ಇಂದು ಮಧ್ಯಾಹ್ನ ಉಭಯದೇಶಗಳ ನಡುವೆ ಮಾತುಕತೆ ನಡೆದು, ಯುದ್ಧ ಅಂತ್ಯವಾಗುವ ನಿರೀಕ್ಷೆಯಿದೆ.
ಉಕ್ರೇನ್ ಮೇಲಿನ ರಷ್ಯಾ ಯುದ್ಧ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ರಷ್ಯಾ ಮಾತುಕತೆ ಆಹ್ವಾನವನ್ನು ಒಪ್ಪಿರುವ ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ, ರಷ್ಯಾ ಮೊದಲು ತನ್ನ ದಾಳಿಯನ್ನು ನಿಲ್ಲಿಸಲಿ ಎಂದು ಹೇಳಿದ್ದಾರೆ. ಈ ನಡುವೆ ರಷ್ಯಾದ ದಾಳಿ ತೀವ್ರತೆ ತಗ್ಗಿದೆ ಎಂದು ವರದಿಯಾಗಿದೆ.
ರಷ್ಯಾದ ಬಲ ಕುಗ್ಗುತ್ತಿದೆ, ಅದು ಈಗ ನಮಗೆ ಹೆದರಲು ಆರಂಭಿಸಿದೆ ಎಂದ ಉಕ್ರೇನ್….!
ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 3:30ಕ್ಕೆ ರಷ್ಯಾ ಹಾಗೂ ಉಕ್ರೇನ್ ನಡುವೆ ಬೆಲಾರಸ್ ನಲ್ಲಿ ಶಾಂತಿ ಮಾತುಕತೆ ನಡೆಯಲಿದೆ. ಬೆಲಾರಸ್ ನ ಗೊಮೆಲ್ ನಲ್ಲಿ ಮಾತುಕತೆಗೆ ಸಮಯ ನಿಗದಿಯಾಗಿದ್ದು, ಈ ವೇಳೆ ಉಕ್ರೇನ್ ಒಪ್ಪಂದಕ್ಕೆ ಬರುವ ವಿಶ್ವಾಸವಿದೆ ಎಂದು ರಷ್ಯಾ ತಿಳಿಸಿದೆ.