alex Certify ರಷ್ಯಾದ ಬಲ ಕುಗ್ಗುತ್ತಿದೆ, ಅದು ಈಗ ನಮಗೆ ಹೆದರಲು ಆರಂಭಿಸಿದೆ ಎಂದ ಉಕ್ರೇನ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾದ ಬಲ ಕುಗ್ಗುತ್ತಿದೆ, ಅದು ಈಗ ನಮಗೆ ಹೆದರಲು ಆರಂಭಿಸಿದೆ ಎಂದ ಉಕ್ರೇನ್​….!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​ ಉಕ್ರೇನ್​​ನ ವಿರುದ್ಧ ಯುದ್ಧ ಘೋಷಣೆ ಮಾಡಿ ಐದನೇ ದಿನವಾದ ಇಂದು ಸಹ ಉಕ್ರೇನ್​​ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಉಕ್ರೇನ್​ ನೀಡಿರುವ ಮಾಹಿತಿಯ ಪ್ರಕಾರ ಉಕ್ರೇನ್​ನಲ್ಲಿ ಈವರೆಗೆ 352 ಮಂದಿ ಸಾವನ್ನಪ್ಪಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಉಕ್ರೇನ್​ ಸಶಸ್ತ್ರ ಪಡೆಗಳ ಜನರಲ್​ ಸ್ಟಾಫ್​ ರಷ್ಯಾದ ಪಡೆಗಳು ಉಕ್ರೇನ್​ನ ಮೇಲೆ ಆಕ್ರಮಣದ ತೀವ್ರತೆಯನ್ನು ಕಡಿಮೆ ಮಾಡಿವೆ ಎಂದು ಮಾಹಿತಿ ನೀಡಿದ್ದಾರೆ. ರಷ್ಯಾದ ಮಿಲಿಟರಿ ಪಡೆಯು ಉಕ್ರೇನ್​ನ ಎಲ್ಲಾ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದೆ. ಆದರೆ ಮಿಲಿಟರಿ ಕಾರ್ಯಾಚರಣೆಯ ಮೂಲಕ ರಷ್ಯಾವು ಯಾವ ಗುರಿಯನ್ನು ಸಾಧಿಸಬೇಕು ಎಂದುಕೊಂಡಿತ್ತೋ ಆ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ ಉಕ್ರೇನಿಯನ್​ ಬ್ರಿಗೇಡ್​ಗಳಲ್ಲಿ ಫಿರಂಗಿಯ ದಾಳಿಯು ಶತ್ರು ರಾಷ್ಟ್ರದ ಐದಕ್ಕೂ ಹೆಚ್ಚು ಭಾರೀ ಶಸ್ತ್ರಾಸ್ತ್ರಗಳು ಹಾಗೂ ಸೇನಾ ಶಕ್ತಿಯನ್ನು ನಾಶಪಡಿಸಿದೆ. ರಷ್ಯಾವು ಹತಾಶವಾಗುತ್ತಿದೆ. ಹಾಗೂ ಭಾರೀ ನಷ್ಟವನ್ನು ಅನುಭವಿಸುತ್ತಿದೆ. ಇಲ್ಲಿನ ವಾಸ್ತವ ಬೇರೆಯದ್ದೇ ಇದೆ ಎಂಬುದನ್ನು ರಷ್ಯಾ ಅರಿತುಕೊಂಡಿದೆ. ರಷ್ಯಾ ಇದೀಗ ಉಕ್ರೇನ್​ಗೆ ಹೆದರಲು ಆರಂಭಿಸಿದೆ ಎಂದು ಹೇಳಿದ್ದಾರೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...