
ಕೀವ್: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ಮುಂದುವರೆದಿದೆ. ಈ ನಡುವೆ ಉಕ್ರೇನ್ ನ ಸಾವಿರಾರು ನಾಗರಿಕರು ಸೇನೆ ಸೇರ್ಪಡೆಯಾಗುವ ಮೂಲಕ ರಷ್ಯಾ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ. ಈ ಮಧ್ಯೆ ಭಾರತೀಯ ವಿದ್ಯಾರ್ಥಿಯೋರ್ವ ಇದೀಗ ಉಕ್ರೇನ್ ಸೇನೆ ಸೇರ್ಪಡೆಯಾಗುವ ಮೂಲಕ ಉಕ್ರೇನ್ ಪರ ನಿಂತಿದ್ದಾನೆ.
ತಮಿಳುನಾಡಿನ ಕೊಯಮತ್ತೂರು ಮೂಲದ ವಿದ್ಯಾರ್ಥಿ ಸಾಯಿನಿಕೇಶ್ ರವಿಚಂದ್ರನ್ ಉಕ್ರೇನ್ ಅರೆ ಸೇನಾಪಡೆ ಸೇರಿದ್ದಾರೆ. ಈ ಮೂಲಕ ರಷ್ಯಾ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ.
ONLINE ನಲ್ಲಿ ಸಂಚಲನ ಸೃಷ್ಟಿಸಿದ್ದಾಳೆ ಈ ಬಲೂನ್ ಬಾಲೆ
2018ರಲ್ಲಿ ಉಕ್ರೇನ್ ಗೆ ತೆರಳಿದ್ದ ವಿದ್ಯಾರ್ಥಿ ರವಿಚಂದ್ರನ್, ಖಾರ್ಕೀವ ನ್ಯಾಷನಲ್ ಏರೋಸ್ಪೇಸ್ ವಿವಿಯ ವಿದ್ಯಾರ್ಥಿಯಾಗಿದ್ದರು. ಭಾರತೀಯ ಸೇನೆ ಸೇರಲು ಅರ್ಜಿ ಸಲ್ಲಿಸಿದ್ದರು. ಆದರೆ ಭಾರತೀಯ ಸೇನೆಗೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಇದೀಗ ಉಕ್ರೇನ್ ಸೇನೆಯನ್ನು ಸೇರಿದ್ದಾರೆ.
