alex Certify WAR BREAKING: ಉಕ್ರೇನ್ ನಲ್ಲಿ ನಿರಾಶ್ರಿತರಾದ 15 ಲಕ್ಷ ನಾಗರಿಕರು; ಸಂಘರ್ಷ ನಿಲ್ಲಿಸದಿದ್ದರೆ ದೇಶವೇ ಇಲ್ಲದಂತಾಗುವುದು; ಎಚ್ಚರಿಕೆ ನೀಡಿದ ರಷ್ಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ಉಕ್ರೇನ್ ನಲ್ಲಿ ನಿರಾಶ್ರಿತರಾದ 15 ಲಕ್ಷ ನಾಗರಿಕರು; ಸಂಘರ್ಷ ನಿಲ್ಲಿಸದಿದ್ದರೆ ದೇಶವೇ ಇಲ್ಲದಂತಾಗುವುದು; ಎಚ್ಚರಿಕೆ ನೀಡಿದ ರಷ್ಯಾ

ಕೀವ್: ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಭೀಕರ ಯುದ್ಧ ಇಂದು 11ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಯಿಂದಾಗಿ ಉಕ್ರೇನ್ ನ 15 ಲಕ್ಷ ನಾಗರಿಕರು ನಿರಾಶ್ರಿತರಾಗಿದ್ದಾರೆ. ಇಷ್ಟಾಗ್ಯೂ ಉಭಯ ದೇಶಗಳ ನಡುವಿನ ಕದನ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.

ರಷ್ಯಾ, ಉಕ್ರೇನ್ ವಿರುದ್ಧ ಮತ್ತಷ್ಟು ದಾಳಿಗಳನ್ನು ತೀವ್ರಗೊಳಿಸಲು ಸಜ್ಜಾಗುತ್ತಿದೆ. ಉಕ್ರೇನ್ ಗೆ ಮುಂದಿನ ದಿನಗಳಲ್ಲಿ ಯಾವುದೇ ಶಸ್ತ್ರಾಸ್ತ್ರ ಕೊಡಬಾರದು ಎಂದು ಐರೋಪ್ಯ ಒಕ್ಕೂಟ ಹಾಗೂ ನ್ಯಾಟೋ ಸಂಘಟನೆಗಳಿಗೆ ರಷ್ಯಾ ತಾಕೀತು ಮಾಡಿದೆ. ಅಲ್ಲದೇ ರಷ್ಯಾ ಸೇನೆ ಮೇಲಿನ ದಾಳಿಯನ್ನು ಉಕ್ರೇನ್ ತಕ್ಷಣ ನಿಲ್ಲಿಸಬೇಕು ಇಲ್ಲವಾದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಯುವತಿಗೆ ಟ್ಯಾಟೂ ಹಾಕುವಾಗ ರೇಪ್: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಲಾವಿದ ಅರೆಸ್ಟ್

ಉಕ್ರೇನ್ ನಡವಳಿಕೆ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಕ್ರೇನ್ ಗೆ ಇರುವ ಪ್ರತ್ಯೇಕ ದೇಶದ ಸ್ಥಾನಮಾನ ಅಪಾಯಕ್ಕೀಡಾಗಬಹುದು ಎಂದು ರಷ್ಯಾ ಅಧ್ಯಕ್ಷ ಪುಟಿನ್ ತಿಳಿಸಿದ್ದಾರೆ. ರಷ್ಯಾ ಕಠಿಣ ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾದರೆ ಅದರ ಸಂಪೂರ್ಣ ಹೊಣೆ ಉಕ್ರೇನ್ ಆಡಳಿತಗಾರರೇ ಆಗಿರುತ್ತಾರೆ ಎಂದು ಹೇಳುವ ಮೂಲಕ ಉಕ್ರೇನ್ ಅಸ್ತಿತ್ವದ ಬಗ್ಗೆಯೇ ಸವಾಲು ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...