alex Certify ಶಿಕ್ಷಣ ಸಾಲ ಪಡೆಯುವ ಮೊದಲು ನಿಮಗಿದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಣ ಸಾಲ ಪಡೆಯುವ ಮೊದಲು ನಿಮಗಿದು ತಿಳಿದಿರಲಿ

ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಪ್ರತಿಯೊಬ್ಬ ಪಾಲಕರು ಬಯಸ್ತಾರೆ. ಇದೇ ಕಾರಣಕ್ಕೆ ಎಜುಕೇಷನ್ ಲೋನ್ ಪಡೆಯುತ್ತಾರೆ. ಶಿಕ್ಷಣಕ್ಕಾಗಿ ಸಾಲ ಪಡೆಯುವ ಮೊದಲು ಕೆಲವೊಂದು ವಿಷ್ಯಗಳನ್ನು ತಿಳಿದಿರಬೇಕು.

ಫಿನ್ಟೆಕ್ ಕಂಪನಿಯ ಗ್ರೇಕ್ವೆಸ್ಟ್ ಪ್ರಕಾರ, ಉನ್ನತ ಶಿಕ್ಷಣದ ವೆಚ್ಚ ಹೆಚ್ಚಾಗಿರುವ ಕಾರಣ, ಭಾರತೀಯ ಕುಟುಂಬಗಳು ತಮ್ಮ ವಾರ್ಷಿಕ ಆದಾಯದ ಶೇಕಡಾ 13ರಷ್ಟನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತವೆ. ಕುಟುಂಬದಲ್ಲಿ ಹೆಚ್ಚು ಮಕ್ಕಳಿದ್ದರೆ ಈ ಖರ್ಚು ಇನ್ನೂ ಹೆಚ್ಚಾಗುತ್ತದೆ. ತಮ್ಮ ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡಲು ಪೋಷಕರು ಶಿಕ್ಷಣ ಸಾಲದತ್ತ ಮುಖ ಮಾಡುತ್ತಾರೆ. ಹೆಚ್ಚಿನ ಪೋಷಕರು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ಶಿಕ್ಷಣ ಸಾಲವನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವುದು ಇದಕ್ಕೆ ಕಾರಣ.

ಸರ್ಕಾರಿ ಬ್ಯಾಂಕುಗಳಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರಮವಾಗಿ ಶೇಕಡಾ 6.8, ಶೇಕಡಾ 6.85 ಮತ್ತು ಶೇಕಡಾ 6.90ರಷ್ಟು ಬಡ್ಡಿ ವಿಧಿಸುತ್ತವೆ. ಖಾಸಗಿ ಬ್ಯಾಂಕುಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕ್ರಮವಾಗಿ ಶೇಕಡಾ 9.55, ಶೇಕಡಾ 9.70 ಮತ್ತು ಶೇಕಡಾ 10.50 ರಷ್ಟು ಬಡ್ಡಿದರಲ್ಲಿ ಸಾಲ ನೀಡುತ್ತವೆ.

ಬೆಲೆ ಏರಿಕೆಯಿಂದ ತತ್ತರಿಸಿರುವ ಶ್ರೀಸಾಮಾನ್ಯನಿಗೆ ಮತ್ತೊಂದು‌ ಶಾಕ್: ಶೀಘ್ರದಲ್ಲೇ ಏರಿಕೆಯಾಗಲಿದೆ ಮೊಬೈಲ್ ರಿಚಾರ್ಜ್ ದರ

ಶಿಕ್ಷಣ ಸಾಲದ ಮರುಪಾವತಿ ಅವಧಿ ಅಧಿಕವಾಗಿರುತ್ತದೆ. ಬ್ಯಾಂಕ್ ಆಫ್ ಬರೋಡಾ ಮತ್ತು ಯೂನಿಯನ್ ಬ್ಯಾಂಕ್ ಗರಿಷ್ಠ 15 ವರ್ಷಗಳವರೆಗೆ ಮರುಪಾವತಿ ಮಾಡಲು ಅವಕಾಶ ನೀಡುತ್ತದೆ. ಆದ್ರೆ ಫಿನ್‌ಟೆಕ್ ಕಂಪನಿಗಳು ಮತ್ತು ಎನ್‌ಬಿಎಫ್‌ಸಿಗಳಲ್ಲಿ ಈ ಅವಕಾಶವಿರುವುದಿಲ್ಲ.

ಎನ್‌ಬಿಎಫ್‌ಸಿ ಮತ್ತು ಫಿನ್‌ಟೆಕ್ ಕಂಪನಿಗಳಿಂದ ಸಾಲ ಪಡೆಯುವ ಪ್ರಕ್ರಿಯೆ ಸುಲಭ. ಇಲ್ಲಿ ಬೇಗ ಸಾಲ ಸಿಗುತ್ತದೆ. ಎನ್‌ಬಿಎಫ್‌ಸಿ ಮತ್ತು ಫಿನ್‌ಟೆಕ್ ಕಂಪನಿಗಳಿಗೆ ಹೋಲಿಸಿದರೆ, ಬ್ಯಾಂಕುಗಳಿಂದ ಶಿಕ್ಷಣ ಸಾಲ ಪಡೆಯುವ ಪ್ರಕ್ರಿಯೆಗೆ ಸಮಯ ಹಿಡಿಯುತ್ತದೆ. ಅನೇಕ ಅರ್ಜಿ ಭರ್ತಿ ಮಾಡುವ ಜೊತೆಗೆ ಅನೇಕ ಬಾರಿ ಶಾಖೆಗೆ ಅಲೆದಾಡಬೇಕು. ಹೊಸ ಕೋರ್ಸ್ಗಳಿಗೆ ಖಾಸಗಿ ಹಣಕಾಸು ಕಂಪನಿಗಳಿಗಿಂತ ಬ್ಯಾಂಕುಗಳಿಂದ ಶಿಕ್ಷಣ ಸಾಲ ಪಡೆಯುವುದು ಹೆಚ್ಚು ಕಷ್ಟಕರವಾಗಿರುತ್ತದೆ. ಬಡ್ಡಿ ದರವನ್ನು ಮಾತ್ರ ಮಾನದಂಡವಾಗಿ ನೋಡದೆ ಶಿಕ್ಷಣ ಸಾಲ ಪಡೆಯುವ ಮೊದಲು ಮರುಪಾವತಿ ಅವಧಿ ಸೇರಿದಂತೆ ಅನೇಕ ವಿಷ್ಯಗಳನ್ನು ಗಮನಿಸಬೇಕು.

ಶಿಕ್ಷಣ ಸಾಲದ ಮರುಪಾವತಿಸಿದ ಬಡ್ಡಿ ಸೆಕ್ಷನ್ 80 ಇ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿದೆ. ಈ ತೆರಿಗೆ ಕಡಿತವು ಸಾಲ ಮರುಪಾವತಿಯ ಪ್ರಾರಂಭದಿಂದ 8 ವರ್ಷಗಳವರೆಗೆ ಮಾತ್ರ ಲಭ್ಯವಿದೆ. ಆದ್ದರಿಂದ ತೆರಿಗೆ ಕಡಿತದಿಂದ ಗರಿಷ್ಠ ಲಾಭ ಪಡೆಯಲು ಸಾಲಗಾರರು ತಮ್ಮ ಶಿಕ್ಷಣ ಸಾಲ ಮರುಪಾವತಿಯನ್ನು 8 ವರ್ಷಗಳವರೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿರಬೇಕು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...