alex Certify ಇಪಿಎಫ್‌ಓ ಚಂದಾದಾರಾಗಲು ಬೇಕಾಗುವ UAN ನಂಬರ್‌ ಪಡೆಯಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಪಿಎಫ್‌ಓ ಚಂದಾದಾರಾಗಲು ಬೇಕಾಗುವ UAN ನಂಬರ್‌ ಪಡೆಯಲು ಹೀಗೆ ಮಾಡಿ

ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರಾಗಲು ನೀವು ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್‌) ಸಂಖ್ಯೆಯನ್ನು ಹೊಂದಿರಬೇಕು.

ಉದ್ಯೋಗದಾತರು ಉದ್ಯೋಗಿಗಳಿಗಾಗಿ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಓ) ಪೋರ್ಟಲ್ ಮೂಲಕ ಬಳಸಿಕೊಂಡು ಸಾರ್ವತ್ರಿಕ ಖಾತೆ ಸಂಖ್ಯೆಗಳನ್ನು ರಚಿಸಬಹುದು. ವೈಯಕ್ತಿಕ ಬಳಕೆದಾರರು ತಮ್ಮ ಯುಎಎನ್‌ ಸಂಖ್ಯೆಯನ್ನು ಆನ್ಲೈನ್‌ ಮೂಲಕ ರಚಿಸಬಹುದು.

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ವಿಡಿಯೋ

ನಿಮ್ಮ ಬಳಿ ನಿಮ್ಮ 12-ಅಂಕಿಯ ಯುಎಎನ್‌ ಸಂಖ್ಯೆ ಇದ್ದರೆ, ಇಪಿಎಫ್‌ಓ ಖಾತೆ ತೆರೆಯಬಹುದು. ಇದು ನಿಮ್ಮ ಪಾಸ್‌ಬುಕ್ ಅನ್ನು ಪರೀಕ್ಷಿಸಲು ಮತ್ತು ನಿಮ್ಮ ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಬೇಕಾಗುತ್ತದೆ.

ಯುಎಎನ್‌ ಸಂಖ್ಯೆ ಪಡೆಯುವುದು ಹೀಗೆ :

1. https://unifiedportal-mem.epfindia.gov.in/memberinterface/ ಪೋರ್ಟಲ್‌ಗೆ ಭೇಟಿ ಕೊಡಿ.

2. ಡ್ರಾಪ್‌ಡೌನ್ ಮೆನುವಿನಿಂದ ‘Online Aadhaar Verified UAN Allotment’ ಅಥವಾ ‘Direct UAN Allotment’ ಆಯ್ಕೆ ಮಾಡಿ.

3. ನಿಮ್ಮನ್ನು ಈಗ ನಿಮ್ಮ ಆಧಾರ್‌ ನಂಬರ್‌ ಕೇಳಲಾಗುವುದು. ನಿಮ್ಮ ಆಧಾರ್‌ ಸಂಖ್ಯೆ ಸಲ್ಲಿಸುತ್ತಲೇ Generate OTP ಮೇಲೆ ಕ್ಲಿಕ್ ಮಾಡಿ.

4. ನಿಮ್ಮ ನೋಂದಾಯಿತ ದೂರವಾಣಿ ಸಂಖ್ಯೆಗೆ ಓಟಿಪಿ ಬರಲಿದೆ.

5. ಓಟಿಪಿ ಸಲ್ಲಿಸಿದ ಬಳಿಕ ಡಿಸ್ಕ್ಲೇಮರ್‌ ಅನ್ನು ಒಪ್ಪಿರುವುದಾಗಿ ಕ್ಲಿಕ್ ಮಾಡಿ. ವಿವರಗಳನ್ನು ಪರಿಶೀಲಿಸಿ ಅಗತ್ಯವಾದ ವಿಭಾಗಗಳನ್ನು ಸೂಕ್ತ ಮಾಹಿತಿಯೊಂದಿಗೆ ಭರ್ತಿ ಮಾಡಿ.

6. ಕ್ಯಾಪ್ಚಾ ಕೋಡ್ ಸಲ್ಲಿಸುತ್ತಲೇ ‘register’ ಮೇಲೆ ಕ್ಲಿಕ್ ಮಾಡಿ.

7. ನಿಮಗೆ ಈಗ ಯುಎಎನ್ ಸಂಖ್ಯೆ ಕೊಡಲಾಗುತ್ತದೆ.

8. ನಿಮ್ಮ ಪರದೆ ಮೇಲೆ, ಯುಎಎನ್ ಸಂಖ್ಯೆ ನೋಡಬಹುದು.

ಈ ಸಂಖ್ಯೆಯನ್ನು ಸಕ್ರಿಯಗೊಳಿಸಲು ನೀವು www.epfindia.inಗೆ ತೆರಳಿ, ಅಲ್ಲಿ ಡ್ರಾಪ್‌-ಡೌನ್ ಮೆನುವಿನಿಂದ Our Services ಆಯ್ಕೆ ಮಾಡಬೇಕು.

ಇದಾದ ಬಳಿಕ ಡ್ರಾಪ್‌ಡೌನ್ ಮೆನುವಿನಲ್ಲಿ Member UAN / Online Service ಆಯ್ಕೆ ಮಾಡಬೇಕು. ಇಲ್ಲಿ Activate Your UAN ಆಯ್ಕೆ ಲಭ್ಯವಿರಲಿದೆ. ಅಲ್ಲಿ ಕ್ಲಿಕ್ ಮಾಡಿದ ಬಳಿ ನಿಮ್ಮ ಯುಎಎನ್, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಎಂಟರ್‌ ಮಾಡಬೇಕು. ಇದಾದ ಮೇಲೆ Get Authorization PIN ಮೇಲೆ ಕ್ಲಿಕ್ ಮಾಡಿ.

ನಿಮ್ಮ ನೋಂದಾಯಿತ ದೂರವಾಣಿ ಸಂಖ್ಯೆಗೆ ಓಟಿಪಿ ಬರುತ್ತದೆ. ಅಂತಿಮವಾಗಿ, Validate OTP ಮತ್ತು Activate UAN ಮೇಲೆ ಕ್ಲಿಕ್ ಮಾಡಿ ಪ್ರಕ್ರಿಯೆ ಪೂರ್ಣ ಗೊಳಿಸಿ. ನಿಮ್ಮ ಯುಎಎನ್ ಸಕ್ರಿಯವಾಗಿರುತ್ತದೆ ಈಗ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...