ಎಲ್ಲಾ ಟೀನೇಜರ್ಗಳಂತೆಯೇ, ವಿಮಾನ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದ ತನ್ನನ್ನು ಕಂಡ ಕಲಾವಿದರೊಬ್ಬರು ತನ್ನ ಚಿತ್ರ ಬಿಡಿಸುತ್ತಿರುವುದನ್ನು ಕಂಡ 18 ವರ್ಷದ ಎಮ್ಮಾ ಕೇನ್ ಪುಳಕಿತಳಾಗಿದ್ದಾಳೆ. ಆದರೆ ಆ ಕಲಾವಿದನ ಚಿತ್ರ ಬಲು ಫನ್ನಿಯಾಗಿ ಬಂದಿದೆ.
ಲಾಸ್ ಏಂಜಲೀಸ್ಗೆ ಸಂಪರ್ಕಿಸುವ ಫ್ಲೈಟ್ಗಾಗಿ ಮಿನೆಸೋಟಾ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಕೇನ್, ಆ ಕಲಾವಿದನಿಗೆ ಬಹಳ ಉತ್ಸಾಹದಿಂದಲೇ ಪೋಸ್ ಕೊಟ್ಟು ಚಿತ್ರ ಬಿಡಿಸಲು ಸಹಕರಿಸಿದ್ದಾಳೆ.
ಕೊರೋನಾ ಬಳಿಕ ಮತ್ತೊಂದು ಬಿಗ್ ಶಾಕ್: ಸಾವಿನ ಮನೆಗೆ ತಳ್ಳುವ ಮಾರಕ ಮಾರ್ಬರ್ಗ್ ವೈರಸ್ ಆತಂಕ, WHO ಎಚ್ಚರಿಕೆ
ತನ್ನ ಚಿತ್ರ ಫನ್ನಿ ಕಾರ್ಟೂನ್ನಂತೆ ಬಿಡಿಸಿದರೂ ಆ ಕಲಾವಿದನ ಪ್ರಯತ್ನಕ್ಕೆ ಮೆಚ್ಚುಗೆ ಸೂಸಿದ ಕೇನ್, ಆತನೊಂದಿಗೆ ವಿಮಾನ ನಿಲ್ದಾಣದಲ್ಲಿ 40 ನಿಮಿಷಗಳ ಕಾಲ ಮಾತನಾಡಿದ್ದಾಳೆ. ಘಟನೆಯನ್ನು ವಿವರಿಸಿ ಕೇನ್ ಮಾಡಿರುವ ವಿಡಿಯೋ ಟಿಕ್ಟಾಕ್ನಲ್ಲಿ ವೈರಲ್ ಆಗಿದೆ.