ಭಾರತದಲ್ಲಿ ಜುಗಾಡ್ ಐಡಿಯಾಗಳಿಗೇನೂ ಕಮ್ಮಿಯಿಲ್ಲ. ಹಳ್ಳಿಯಿಂದ ದಿಲ್ಲಿವರೆಗೂ ಜುಗಾಡ್ ಐಡಿಯಾಗಳ ಪ್ರದರ್ಶನವನ್ನ ನೋಡಬಹುದು.
ಹೆಚ್ಚು ಖರ್ಚಿಲ್ಲದೇ ಅದ್ಧೂರಿ, ಐಷಾರಾಮಿ ವಸ್ತುಗಳ ನೋಟವನ್ನು ಕಡಿಮೆ ಖರ್ಚಿನಲ್ಲೇ ಪಡೆಯುವಂತಹ ಬುದ್ಧಿವಂತಿಕೆ ಮತ್ತು ಸೃಜನಶೀಲತೆ ಹಲವರಲ್ಲಿದೆ. ಅಂತಹ ವಿಭಿನ್ನ ಪ್ರಯತ್ನದಲ್ಲಿ ಮಾರುತಿ ವ್ಯಾಗನ್ R ಕಾರಿನ ಹಿಂಬದಿಯನ್ನು ಆಟೋಗೆ ಫಿಕ್ಸ್ ಮಾಡಲಾಗಿದೆ.
ಈದೇನು ಕಾರೋ ಅಥವಾ ಆಟೋನೋ? ಎಂದು ದಿಟ್ಟಿಸಿ ನೋಡುವಂತಿದೆ. ಮುಂದಿನಿಂದ ನೋಡಿದ್ರೆ ಆಟೋದಂತೆ ಕಾಣುತ್ತೆ. ಹಿಂದಿನಿಂದ ನೋಡಿದ್ರೆ ಮಾರುತಿ ವ್ಯಾಗನ್ R ಕಾರ್ ನಂತೆ ಕಾಣುತ್ತದೆ. ತ್ರಿಚಕ್ರವಾಹನವನ್ನು ಈ ರೀತಿ ವಿಭಿನ್ನವಾಗಿ ಜೋಡಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಇದರೊಂದಿಗೆ ಇತ್ತೀಚಿಗೆ ಮೆಕಾನಿಕ್ ಇಜರ್ ಅಶ್ರಫ್ ಬಜಾಜ್ ಎಂಬುವವರು ಬಜಾಜ್ ಡೊಮಿನಾರ್ 400 ಅನ್ನು ಸುಜುಕಿ ಹಯಾಬುಸ ಬೈಕ್ ಆಗಿ ಮಾರ್ಪಡಿಸಿದ್ದರು. ಈ ವಿಡಿಯೋ ಕೂಡ ಭಾರೀ ವೈರಲ್ ಆಗಿ ಗಮನ ಸೆಳೆದಿತ್ತು.