ಮತದಾನ ಮಾಡುವ ಅಧಿಕೃತ ವಯಸ್ಸು 18 ಆಗುತ್ತಿದ್ದಂತೆಯೇ ಚುನಾವಣಾ ಆಯೋಗ ಮತದಾನದ ಐಡಿ ಕಾರ್ಡ್ಗಳನ್ನ ನೀಡುತ್ತೆ. ಇದು ಭಾರತದ ನಾಗರೀಕತ್ವವನ್ನ ಸಾಬೀತುಪಡಿಸುವ ದಾಖಲೆಗಳಲ್ಲೊಂದು. 1993ರಲ್ಲಿ ಮೊದಲಗೊಂಡು ಎಲ್ಲಾ ಮತದಾರರಿಗೆ ಚುನಾವಣಾ ಆಯೋಗ ಅವರ ಭಾವಚಿತ್ರವುಳ್ಳ ವೋಟರ್ ಐಡಿಯನ್ನ ನೀಡುತ್ತಾ ಬಂದಿದೆ.
ನಿಮ್ಮ ಹೆಸರನ್ನ ನಿಮ್ಮ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗಿದೆಯೋ ಇಲ್ಲವೋ ಅನ್ನೋದನ್ನ ನೀವು ಮನೆಯಲ್ಲೇ ಕೂತು ಪರಿಶೀಲನೆ ಮಾಡಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನ ಪಾಲಿಸಿ.
ಮೊದಲು ನ್ಯಾಷನಲ್ ವೋಟರ್ಸ್ ಸರ್ವೀಸ್ ವೆಬ್ಸೈಟ್ಗೆ ಹೋಗಿ ( www.nvsp.in)
ವೆಬ್ಸೈಟ್ ಮೇಲೆ ಎಡಭಾಗದಲ್ಲಿ ನಿಮಗೆ ಸರ್ಚ್ ಎಲೆಕ್ಟೋರಲ್ ರೋಲ್ ಎಂಬ ಆಯ್ಕೆ ಕಾಣಸಿಗುತ್ತದೆ.
ಇದರ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು (https://electoralsearch.in/) ಪೇಜ್ಗೆ ಹೋಗುತ್ತೀರಿ.
ನೀವು ಇಲ್ಲಿ ನಿಮ್ಮ ಮಾಹಿತಿಯನ್ನ ನೀಡುವ ಮೂಲಕ ಇಲ್ಲವೇ ನಿಮ್ಮ ಮತದಾರ ಸಂಖ್ಯೆಯನ್ನ ನಮೂದಿಸಬಹುದಾಗಿದೆ.
ವೋಟರ್ ಐಡಿಯಲ್ಲಿ ನಮೂದಿಸಲಾದ ಇಪಿಐಸಿ ನಂಬರ್ನ ಹಾಕುವ ಮೂಲಕ ನೀವು ಮತದಾರರ ಪಟ್ಟಿಯಲ್ಲಿ ಇದ್ದೀರೋ ಇಲ್ಲವೋ ಎಂಬುದನ್ನ ಪರಿಶೀಲನೆ ಮಾಡಬಹುದಾಗಿದೆ.
ಒಂದು ವೇಳೆ ನೀವು ನಿಮ್ಮ ಮಾಹಿತಿಯನ್ನ ನಮೂದಿಸುವವರಾಗಿದ್ದರೆ, ನಿಮ್ಮ ಹೆಸರು, ವಯಸ್ಸು, ಲಿಂಗ, ಹುಟ್ಟಿದ ದಿನಾಂಕ , ಜಿಲ್ಲೆ, ತಂದೆ ಇಲ್ಲವೇ ಪತಿಯ ಹೆಸರನ್ನ ನೋಂದಾಯಿಸಬೇಕಾಗುತ್ತೆ. ಇದಾದ ಬಳಿಕ ನಿಮ್ಮ ಕ್ಯಾಪ್ಚಾ ಕೋಡ್ ಸಿಗಲಿದೆ.
ಈಗ ಸರ್ಚ್ ಬಟನ್ನ್ನು ಪ್ರೆಸ್ ಮಾಡಿ. ಈಗ ವೆಬ್ಸೈಟ್ನಲ್ಲಿ ನಿಮ್ಮ ಹೆಸರು ಗೋಚರವಾಗ್ತಿದೆ ಅಂದರೆ ನೀವು ನಿಮ್ಮ ಕ್ಷೇತ್ರದಲ್ಲಿ ಮತದಾನ ಮಾಡಲು ಅರ್ಹರಿದ್ದೀರಿ ಎಂದರ್ಥ.