ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ವಲಸೆ ಪರ್ವ ಶುರುವಾಗಿದೆ. ಯುದ್ಧಕ್ಕೂ ಮುನ್ನ ಉಕ್ರೇನ್ನಲ್ಲಿ ನೆಮ್ಮದಿಯ ಜೀವನ ನಡೆಸಿಕೊಂಡಿದ್ದ ನಿವಾಸಿಗಳು, ತಮ್ಮ ತಾಯ್ನಾಡನ್ನು ತೊರೆದು ಅಕ್ಕಪಕ್ಕದ ರಾಷ್ಟ್ರಗಳ ನಿರಾಶ್ರಿತರ ಶಿಬಿರ ತಲುಪುತ್ತಿದ್ದಾರೆ. ಈ ಎಲ್ಲಾ ಉದ್ವಿಗ್ನ ಸ್ಥಿತಿಗತಿಗಳ ನಡುವೆ, ಉಕ್ರೇನ್ನ ಏಳು ವರ್ಷದ ಬಾಲಕಿಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೋಡಿದವರ ಕಣ್ಣನ್ನು ತೇವವಾಗಿಸುತ್ತಿದೆ.
ಈ ವಿಡಿಯೋವನ್ನು ರೋಮೆನಿಯಾದ ರೆಫ್ಯುಜಿ ಕ್ಯಾಂಪ್ ಒಂದರಲ್ಲಿ ಚಿತ್ರಿಸಲಾಗಿದೆ. ಯುದ್ಧ ಕಾರಣದಿಂದ ಉಕ್ರೇನ್ ತೊರೆದ ಏಳು ವರ್ಷದ ಬಾಲಕಿಗೆ, ಸ್ವಯಂ ಸೇವಕರ ತಂಡ ಹಾಗೂ ತುರ್ತು ಸೇವಾ ಅಧಿಕಾರಿಗಳು ಹುಟ್ಟುಹಬ್ಬದ ಪಾರ್ಟಿ ನೀಡಿದ್ದಾರೆ. ಉಡುಗೊರೆಗಳನ್ನು ನೀಡಿ, ಹಾಡು ಹಾಡಿದ್ದಾರೆ. ಈ ಮೂಲಕ ಯುದ್ಧದಂತಹ ಭೀಕರ ಪರಿಸ್ಥಿತಿಯಲ್ಲೂ ಮಗುವಿನ ಮುಖದಲ್ಲಿ ಮಂದಹಾಸ ಮೂಡಲು ಕಾರಣರಾಗಿದ್ದಾರೆ.
SHOCKING NEWS: ಜಂಟಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಕಳ್ಳತನ; ಬ್ಯಾಟರಿ ಕದ್ದು ಪರಾರಿಯಾದ ಖದೀಮರು
ಹುಟ್ಟುಹಬ್ಬ ಆಚರಿಸಿಕೊಂಡಿರುವ ಬಾಲಕಿಯ ಹೆಸರು ಅರೀನಾ. ಉಕ್ರೇನ್ ತೊರೆಯುವಾಗ ಆರು ವರ್ಷದವಳಾಗಿದ್ದ ಈಕೆ, ಈಗ ಏಳನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಯುದ್ಧದ ಸಂದರ್ಭದಲ್ಲಿ ದಿನಗಟ್ಟಲೆ ರಕ್ಷಣಾ ಕಾರ್ಯಚರಣೆಯಲ್ಲೆ ತಮ್ಮನ್ನು ತಾವು ತೊಡಗಿಕೊಂಡಿಸಿಕೊಂಡಿರುವ ಸ್ವಯಂಸೇವಕರ ತಂಡ, ಪುಟ್ಟ ಅರೀನಾಳ ಸಂತೋಷಕ್ಕಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಸಧ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಪ್ರೇಕ್ಷಕರು ಸ್ವಯಂಸೇವಕರನ್ನು ಹಾಡಿ ಹೊಗಳಿದ್ದಾರೆ.