alex Certify ‘ವ್ಯಾಲೆಂಟೈನ್ಸ್​ ಡೇ’ ಎಂಜಾಯ್​ ಮಾಡೋಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ ಖ್ಯಾತ ನಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವ್ಯಾಲೆಂಟೈನ್ಸ್​ ಡೇ’ ಎಂಜಾಯ್​ ಮಾಡೋಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ ಖ್ಯಾತ ನಟ..!

ವ್ಯಾಲೆಂಟೈನ್ಸ್ ಡೇ ದಿನ ಪತ್ನಿಯೊಂದಿಗೆ ಎಂಜಾಯ್​ ಮಾಡಲು ಹೋಗಿ ಬಾಲಿವುಡ್​ ನಟ ವಿವೇಕ್​ ಒಬೇರಾಯ್​ ಪೇಚಿಗೆ ಸಿಲುಕಿದ್ದಾರೆ. ಮಾಸ್ಕ್​ ಧರಿಸದೇ ಪತ್ನಿಯೊಂದಿಗೆ ಬೈಕ್​​ನಲ್ಲಿ ಓಡಾಡುತ್ತಿದ್ದ ವಿಡಿಯೋ ಶೇರ್​ ಮಾಡಿದ್ದ ವಿವೇಕ್​ ಒಬೆರಾಯ್​ ವಿರುದ್ಧ ಮುಂಬೈ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್​ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಮಾಸ್ಕ್ ಧರಿಸದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೊದಲೇ ಸೂಚನೆ ನೀಡಲಾಗಿದೆ.

ಬಾಲಿವುಡ್​ ನಟ ವಿವೇಕ್​ ಒಬೆರಾಯ್​ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋದಲ್ಲಿ ವಿವೇಕ್​ ಒಬೆರಾಯ್​ ತಮ್ಮ ಹೊಸ ಬೈಕಿನಲ್ಲಿ ಮಾಸ್ಕ್​ ಇಲ್ಲದೇ ಹೆಲ್ಮೆಟ್​ ಕೂಡ ಧರಿಸದೇ ಹೋಗುತ್ತಿರೋದನ್ನ ಕಾಣಬಹುದಾಗಿದೆ. ಒಬೇರಾಯ್​ ವಿರುದ್ಧ ಐಪಿಸಿ ಸೆಕ್ಷನ್​ 188 ಹಾಗೂ 269 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಲ್ಲದೇ ಹೆಲ್ಮೆಟ್​ ಧರಿಸದ ಕಾರಣಕ್ಕೆ ನಟನ ಬಳಿ 500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಮಹಾರಾಷ್ಟ್ರ ಟ್ರಾಫಿಕ್​ ಪೊಲೀಸ್​ ಇಲಾಖೆ ಮಾಹಿತಿ ನೀಡಿದೆ.

View this post on Instagram

A post shared by Vivek Oberoi (@vivekoberoi)

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...