ನೋಟು ಅಮಾನ್ಯೀಕರಣ ಘೋಷಣೆಯಾಗಿ ಐದು ವರ್ಷಗಳು ಪೂರ್ಣವಾಗುತ್ತಿವೆ. ಆಗ 500 ರೂ. ಮತ್ತು 1000 ರೂ. ಮುಖಬೆಲೆ ನೋಟುಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಮಾನ್ಯಗೊಳಿಸಿದಾಗ ಹಲವು ದಿನಗಳವರೆಗೆ ದೇಶದಲ್ಲಿ ಜನರು ತಮ್ಮ ಬಳಿಯ ಹಣವನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್‌ಗಳ ಮುಂದೆ ಕಿ.ಮೀ.ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದರು. ಇದನ್ನು ಮರೆಯಲು ಸಾಧ್ಯವೇ ಇಲ್ಲಬಿಡಿ.
ಆದರೆ, ಸದ್ಯ ತಮಿಳುನಾಡಿನ ಅಂಧ ಭಿಕ್ಷುಕ ಚಿನ್ನುಕಣ್ಣು ಎಂಬಾತನಿಗೆ ನೋಟು ಅಮಾನ್ಯೀಕರಣದ ಬಿಸಿ ಮುಟ್ಟಿದೆ ! ಹೌದು, ತನಗೆ ಸಿಕ್ಕ ಭಿಕ್ಷೆಯನ್ನೆಲ್ಲ ಸಂಗ್ರಹಿಸಿಡುತ್ತಿದ್ದ ಆತನಿಗೆ ತನ್ನ ಸಂಗ್ರಹದಲ್ಲಿರುವ 65,000 ರೂ. ಮೊತ್ತದ ನೋಟುಗಳು ಅಮಾನ್ಯೀಕರಣ ಆಗಿಹೋಗಿರುವಂಥವು ಎಂದು ಇತ್ತೀಚೆಗೆ ಅರ್ಥವಾಗಿದೆ.
ಸಮುದ್ರ ತಳದಲ್ಲಿ ಬರೋಬ್ಬರಿ 900-ವರ್ಷ ಹಳೆಯ ಖಡ್ಗ ಪತ್ತೆ
ಅಯ್ಯೋ ದೇವರೇ….. ಎನ್ನುತ್ತಾ ಅಂಧ ಭಿಕ್ಷುಕ ಕೃಷ್ಣಗಿರಿಯ ಜಿಲ್ಲಾಧಿಕಾರಿ ಬಳಿ ತೆರಳಿ ಗೋಳು ಹೇಳಿಕೊಂಡಿದ್ದಾನೆ. ಭಾರತೀಯ ರಿಸರ್ವ್ ಬ್ಯಾಂಕ್‌ಗೆ ತಿಳಿಸಿ, ವಿಶೇಷ ಪ್ರಕರಣ ಎಂದು ಪರಿಗಣಿಸುವ ಮೂಲಕ ನೋಟುಗಳನ್ನು ಬದಲಾಯಿಸಿಕೊಡಿ. ಇಲ್ಲವಾದರೆ, ಜೀವನ ಸಾಗಿಸಲು ಕಷ್ಟವಾಗುತ್ತದೆ ಎಂದು ಬೇಡಿಕೊಂಡಿದ್ದಾನೆ.