ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಕುಟುಂಬದ ಜೊತೆ ಇಂಗ್ಲೆಂಡ್ ನಲ್ಲಿರುವ ಕೊಹ್ಲಿ, ಬಿಡುವಿನ ವೇಳೆ ಮಗಳು ಹಾಗೂ ಪತ್ನಿ ಜೊತೆ ಸಮಯ ಕಳೆಯುತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸದ ವೇಳೆ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ವಾಮಿಕಾಳನ್ನು ಹೇಗೆ ಸಂಭಾಳಿಸುತ್ತಿದ್ದಾರೆಂದು ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪತ್ನಿ ಅನುಷ್ಕಾ ವೇಳಾಪಟ್ಟಿ, ವಾಮಿಕಾ ಮೇಲೆ ಡಿಪೆಂಡ್ ಆಗುತ್ತದೆ. ವಾಮಿಕಾ ಯಾವಾಗ ಏಳ್ತಾಳೆ, ಯಾವಾಗ ಫೀಡಿಂಗ್ ಮಾಡ್ಬೇಕು, ಯಾವಾಗ ಡ್ರೆಸ್ ಹಾಕ್ಬೇಕು ಎಂಬುದರ ಆಧಾರದ ಮೇಲೆ ಅನುಷ್ಕಾ ಇತರ ಕೆಲಸದ ಪ್ಲಾನ್ ಮಾಡ್ತಾರೆ ಎಂದು ಕೊಹ್ಲಿ ಹೇಳಿದ್ದಾರೆ. ಔಟಿಂಗ್ ಪ್ಲಾನ್ ಮಾಡುವ ಮೊದಲು ನಾನು ವಾಮಿಕಾ ನಿದ್ರೆ ಮಾಡುವುದನ್ನು ಕಾಯ್ತೆವೆ. ವಾಮಿಕಾ ನಿದ್ರೆ ಮಾಡಿದ ಮೇಲೆ ಹತ್ತಿರದ ರೆಸ್ಟೋರೆಂಟ್ ಗೆ ಹೋಗಿ ತಿಂಡಿ, ಕಾಫಿ ಮಾಡ್ತೆವೆ. ಬೇಗ ವಾಪಸ್ ಬರಬೇಕಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.
ಇದೇ ವೇಳೆ ಕೊಹ್ಲಿ, ತಂದೆಯನ್ನು ನೆನಪಿಸಿಕೊಂಡಿದ್ದಾರೆ. ವಾಮಿಕಾಳನ್ನು ನನ್ನ ತಂದೆ ನೋಡಿದ್ರೆ ಎಷ್ಟು ಖುಷಿಪಡ್ತಿದ್ದರು. ನಾನು ಟೀಂ ಇಂಡಿಯಾದಲ್ಲಿ ಆಡುವುದನ್ನೂ ಅವರು ನೋಡಿಲ್ಲ. ನನ್ನ ತಾಯಿ ಮುಖ ನೋಡಿದ್ರೆ ನನಗನ್ನಿಸುತ್ತೆ ನನ್ನ ತಂದೆ ಕೂಡ ವಾಮಿಕಾ ನೋಡಿದ್ರೆ ಇಷ್ಟೇ ಖುಷಿಯಾಗ್ತಿದ್ದರು ಎಂದು ಕೊಹ್ಲಿ ಹೇಳಿದ್ದಾರೆ.