alex Certify BIG NEWS: ಇನ್‌ ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದ ವಿರಾಟ್‌ ಕೊಹ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇನ್‌ ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದ ವಿರಾಟ್‌ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಬಹುಬೇಡಿಕೆಯ ಸೆಲೆಬ್ರಿಟಿ ಅಂತಾ ಹೇಳಿದ್ರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಇವರ ಅಭಿಮಾನಿಗಳ ಸಂಖ್ಯೆ ಯಾವುದೇ ಹೀರೋಗಳಿಗೆ ಕಡಿಮೆ ಇಲ್ಲ.

ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ದಾಖಲೆ ಮಾಡುತ್ತಲೇ ಇರೋ ರನ್​ ಮಷಿನ್​ ಕೊಹ್ಲಿ ಇದೀಗ ಹೊಸ ಮೈಲಿಗಲ್ಲೊಂದನ್ನು ತಲುಪಿದ್ದಾರೆ.

ವಿರಾಟ್​ ಕೊಹ್ಲಿ ಇಂದು ಇನ್​ಸ್ಟಾಗ್ರಾಂನಲ್ಲಿ 150 ಮಿಲಿಯನ್​ ಫಾಲೋವರ್ಸ್​ ಮೀರಿದ ಟೀಂ ಇಂಡಿಯಾದ ಹಾಗೂ ಸಂಪೂರ್ಣ ಏಷ್ಯಾಗೆ ಮೊದಲ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇದು ಮಾತ್ರವಲ್ಲದೇ ಇನ್​ಸ್ಟಾಗ್ರಾಂನಲ್ಲಿ 150 ಮಿಲಿಯನ್​ ಫಾಲೋವರ್ಸ್ ಗುರಿ ದಾಟಿದ ವಿಶ್ವದ 4ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ 150 ಮಿಲಿಯನ್​ಗೂ ಅಧಿಕ ಫಾಲೋವರ್ಸ್ ಹೊಂದಿರುವ ಆಟಗಾರರು :

ಕ್ರಿಸ್ಟಿಯಾನೋ ರೊನಾಲ್ಡೋ – 337 ಮಿಲಿಯನ್​ ಫಾಲೋವರ್ಸ್

ಲಿಯೋನಲ್​ ಮೆಸ್ಸಿ – 260 ಮಿಲಿಯನ್​ ಫಾಲೋವರ್ಸರ್

ನೆಯ್ಮಾರ್ – 160 ಮಿಲಿಯನ್​ ಫಾಲೋವರ್ಸ್​

ವಿರಾಟ್​ ಕೊಹ್ಲಿ – 150 ಮಿಲಿಯನ್​ ಫಾಲೋವರ್ಸ್​

ಇನ್​ಸ್ಟಾಗ್ರಾಂನ ಪೋಸ್ಟ್​​ಗಳಿಗೆ ಅತೀ ಹೆಚ್ಚು ಸಂಭಾವನೆ ಕೇಳುವವರಲ್ಲಿ ವಿರಾಟ್​ ಕೊಹ್ಲಿ ದೇಶದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಪ್ರತಿ ಪೋಸ್ಟ್​ಗೆ ವಿರಾಟ್​ ಕೊಹ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ..! ಇದೀಗ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿರುವುದರಿಂದ ಸಂಭಾವನೆ ಮೊತ್ತ ಕೂಡ ಜಾಸ್ತಿ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...