
ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ದಾಖಲೆ ಮಾಡುತ್ತಲೇ ಇರೋ ರನ್ ಮಷಿನ್ ಕೊಹ್ಲಿ ಇದೀಗ ಹೊಸ ಮೈಲಿಗಲ್ಲೊಂದನ್ನು ತಲುಪಿದ್ದಾರೆ.
ವಿರಾಟ್ ಕೊಹ್ಲಿ ಇಂದು ಇನ್ಸ್ಟಾಗ್ರಾಂನಲ್ಲಿ 150 ಮಿಲಿಯನ್ ಫಾಲೋವರ್ಸ್ ಮೀರಿದ ಟೀಂ ಇಂಡಿಯಾದ ಹಾಗೂ ಸಂಪೂರ್ಣ ಏಷ್ಯಾಗೆ ಮೊದಲ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಇದು ಮಾತ್ರವಲ್ಲದೇ ಇನ್ಸ್ಟಾಗ್ರಾಂನಲ್ಲಿ 150 ಮಿಲಿಯನ್ ಫಾಲೋವರ್ಸ್ ಗುರಿ ದಾಟಿದ ವಿಶ್ವದ 4ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ 150 ಮಿಲಿಯನ್ಗೂ ಅಧಿಕ ಫಾಲೋವರ್ಸ್ ಹೊಂದಿರುವ ಆಟಗಾರರು :
ಕ್ರಿಸ್ಟಿಯಾನೋ ರೊನಾಲ್ಡೋ – 337 ಮಿಲಿಯನ್ ಫಾಲೋವರ್ಸ್
ಲಿಯೋನಲ್ ಮೆಸ್ಸಿ – 260 ಮಿಲಿಯನ್ ಫಾಲೋವರ್ಸರ್
ನೆಯ್ಮಾರ್ – 160 ಮಿಲಿಯನ್ ಫಾಲೋವರ್ಸ್
ವಿರಾಟ್ ಕೊಹ್ಲಿ – 150 ಮಿಲಿಯನ್ ಫಾಲೋವರ್ಸ್
ಇನ್ಸ್ಟಾಗ್ರಾಂನ ಪೋಸ್ಟ್ಗಳಿಗೆ ಅತೀ ಹೆಚ್ಚು ಸಂಭಾವನೆ ಕೇಳುವವರಲ್ಲಿ ವಿರಾಟ್ ಕೊಹ್ಲಿ ದೇಶದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಪ್ರತಿ ಪೋಸ್ಟ್ಗೆ ವಿರಾಟ್ ಕೊಹ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ..! ಇದೀಗ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿರುವುದರಿಂದ ಸಂಭಾವನೆ ಮೊತ್ತ ಕೂಡ ಜಾಸ್ತಿ ಆಗಬಹುದು ಎಂದು ನಿರೀಕ್ಷಿಸಲಾಗಿದೆ.