
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಅಕ್ಟೋಬರ್ 24ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನವು 10 ವಿಕೆಟ್ಗಳ ಅಂತರದಲ್ಲಿ ಟೀಂ ಇಂಡಿಯಾವನ್ನು ಮಣಿಸಿತ್ತು. ಇದಾದ ಬಳಿಕ ಮಹಮದ್ ಶಮಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧವನ್ನು ಎದುರಿಸಿದ್ದರು.
ಈ ಪಂದ್ಯ ಮುಗಿದು ವಾರಗಳೇ ಕಳೆದಿದೆ. ವಿರಾಟ್ ಕೊಹ್ಲಿ ಶಮಿ ಪರವಾಗಿ ಮಾತುಗಳನ್ನಾಡಿದ್ದರು. ಆದರೆ ಇದಕ್ಕೆ ಕೆಲ ಕಿಡಿಗೇಡಿಗಳು ಕೊಹ್ಲಿ ಊಹಿಸದ ಮಟ್ಟಿಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಯ 9 ತಿಂಗಳಿಗೆ ಮಗುವಿಗೆ ಅತ್ಯಾಚಾರದ ಬೆದರಿಕೆಯನ್ನು ಹಾಕಲಾಗ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗುತ್ತಿರುವ ಈ ರೀತಿಯ ಬೆದರಿಕೆಗಳ ವಿರುದ್ಧ ಟ್ವೀಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅನ್ಯಧರ್ಮೀಯ ಆಟಗಾರನ ಪರ ನಿಂತಿದ್ದಕ್ಕೆ ಈ ರೀತಿ ಅಮಾನೀಯವಾಗಿ ಬೆದರಿಕೆಗಳನ್ನು ಒಡ್ಡುತ್ತಿರೋದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿಯಾಗಿದೆ ಎಂದು ಬೇಸರ ಹೊರಹಾಕುತ್ತಿದ್ದಾರೆ.
https://twitter.com/atti_cus/status/1454766044678017033