ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆಗಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನಾಡಲಿದೆ. ಈ ಮಧ್ಯೆ 20 ದಿನಗಳ ಕಾಲ ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ. ಕುಟುಂಬದ ಜೊತೆ ಆಟಗಾರರು ಸಮಯ ಕಳೆಯುತ್ತಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾ ಜೊತೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸುತ್ತಿದ್ದಾರೆ. ಕೊಹ್ಲಿ ಮಗಳು ವಮಿಕಾಗೆ 6 ತಿಂಗಳು ಪೂರ್ಣಗೊಂಡಿದೆ. ಇದನ್ನು ಕೊಹ್ಲಿ ಹಾಗೂ ಅನುಷ್ಕಾ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಕೊಹ್ಲಿ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೊಹ್ಲಿ ಮಗಳೊಂದಿಗೆ ಆಡ್ತಿದ್ದಾರೆ. ಮಗುವನ್ನು ಎತ್ತಿಕೊಂಡಿರುವ ಕೊಹ್ಲಿ, ಫೋಟೋವನ್ನೂ ಹಂಚಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರು ತಿಂಗಳು ಪೂರ್ಣಗೊಳಿಸಿದ ಮಗಳಿಗಾಗಿ ದಂಪತಿ ಕೇಕ್ ಕತ್ತರಿಸಿದ್ದಾರೆ. ಮಗುವಿನ ಒಂದು ನಗು ನಮ್ಮ ಇಡೀ ಪ್ರಪಂಚವನ್ನು ಬದಲಿಸಬಹುದು ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.