ವಸ್ತು ಸಂಗ್ರಹಾಲಯ. ಹೆಸರು ಹೇಳುವಂತೆ ಅಲ್ಲಿ ಬಗೆ ಬಗೆಯ ವಸ್ತುಗಳಿರುತ್ತವೆ. ವಿವಿಧ ವರ್ಣಚಿತ್ರಗಳು, ಶಿಲ್ಪಗಳು, ಕಲಾಕೃತಿಗಳು ಹೀಗೆ ಅನೇಕ ವಸ್ತುಗಳನ್ನು ನಾವು ನೋಡಬಹುದು. ಅನೇಕ ವಸ್ತುಸಂಗ್ರಹಾಲಯಗಳು, ವರ್ಣಚಿತ್ರಗಳು ಮತ್ತು ಛಾಯಾಚಿತ್ರ ಕೂಡ ಇರುತ್ತದೆ.
ಉದ್ಯೋಗದ ಹೆಸರಲ್ಲಿ ವಂಚನೆ…! ಉದ್ಯೋಗಾಕಾಂಕ್ಷಿಗಳಿಗೆ ʼಇಂಡಿಗೋʼ ವಾರ್ನಿಂಗ್
ಮ್ಯೂಸಿಯಂನಲ್ಲಿ ಕೆಲವು ವರ್ಣಚಿತ್ರಗಳು ಸ್ವಲ್ಪ ಭಿನ್ನವಾಗಿರುತ್ತವೆ. ಆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಅಂತ ಛಾಯಾಚಿತ್ರಗಳನ್ನು ಹೊಂದಿರುವ ಮ್ಯೂಸಿಯಂ ಒಂದು ಸೂಪರ್ ಪ್ಲಾನ್ ಮಾಡಿದೆ. ವಯಸ್ಕರ ವೆಬ್ಸೈಟ್ನಲ್ಲಿ ತನ್ನ ಖಾತೆಯನ್ನು ತೆರೆದಿದೆ. ಅದ್ರಲ್ಲಿ ನಗ್ನ ಫೋಟೋ ಮತ್ತು ಛಾಯಾಚಿತ್ರಗಳನ್ನು ಹಂಚಿಕೊಳ್ಳುತ್ತಿದೆ.
ಹಿಂದಿ ʼರಾಷ್ಟ್ರ ಭಾಷೆʼ ಎಂದು ಹೇಳಿ ಕೆಲಸ ಕಳೆದುಕೊಂಡ ಜೊಮ್ಯಾಟೋ ಸಿಬ್ಬಂದಿ…!
ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಅನೇಕ ವಸ್ತುಸಂಗ್ರಹಾಲಯಗಳು ಇಂಥ ಛಾಯಾಚಿತ್ರಗಳನ್ನು ಹೊಂದಿವೆ. ಆ ಛಾಯಾಚಿತ್ರಗಳ ವಿರುದ್ಧ ಸಾಕಷ್ಟು ವಿರೋಧ ಕೇಳಿ ಬರ್ತಿದೆ. ಅದ್ರಿಂದ ಬೇಸತ್ತ ವಸ್ತು ಸಂಗ್ರಹಾಲಯದವರು, ಫೋಟೋಗಳನ್ನು ಪೋರ್ನ್ ವೆಬ್ಸೈಟ್ ನಲ್ಲಿ ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಓನ್ಲಿಫನ್ಸ್ ನಲ್ಲಿ ಖಾತೆ ತೆರೆದಿದ್ದು, ವಯಸ್ಕರ ಚಿತ್ರಗಳು ಮತ್ತು ಗ್ಯಾಲರಿಯ ಫೋಟೋಗಳನ್ನು ಹಂಚಿಕೊಳ್ಳುತ್ತಿವೆ.
ಆಲ್ಬರ್ಟಿನಾ ಮ್ಯೂಸಿಯಂನ ಟಿಕ್ಟಾಕ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ವಿವಿಧ ಸಮಯಗಳಲ್ಲಿ ನಿಷೇಧಿಸಲಾಗಿದೆ. ಈ ಫೋಟೋಗಳು ಸಮಾಜಕ್ಕೆ ಧಕ್ಕೆ ತರುತ್ತವೆ ಎನ್ನಲಾಗಿದೆ. ಇದ್ರಿಂದ ಬೇಸತ್ತ ಅಲ್ಬರ್ಟಿನಾ ಮ್ಯೂಸಿಯಂ ಸೇರಿದಂತೆ ಅನೇಕ ವಸ್ತು ಸಂಗ್ರಹಾಲಯಗಳು ಆನ್ಲೈನ್ ಖಾತೆ ಆರಂಭಿಸಿವೆ. ನೇರವಾಗಿ ವೀಕ್ಷಿಸಿಬೇಕೆಂಬ ಅಭಿಮಾನಿಗಳಿಗೆ ಆನ್ಲೈನ್ ಟಿಕೆಟ್ ವಿತರಿಸುತ್ತದೆ.