ಕೋತಿಯೊಂದು ಮರದ ಎಲೆಗಳನ್ನು ಜಿಂಕೆಗಳು ತಿನ್ನಲು ಸಹಾಯವಾಗುವಂತೆ ಮರದ ಕೊಂಬೆಯನ್ನು ಬಗ್ಗಿಸಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ಯಾರಿಗೇ ಆದರೂ ಪ್ರಾಣಿಗಳಲ್ಲಿರುವ ಸಹಾಯದ ಗುಣ, ಪರಸ್ಪರ ಸಹಕಾರ, ಸಹಬಾಳ್ವೆಯ ಮನೋಭಾವ ಮನುಷ್ಯನಿಗಿಲ್ಲವಲ್ಲ ಎಂದೆನಿಸದಿರದು. ಐಐಟಿ ಮದ್ರಾಸ್ ಕ್ಯಾಂಪಸ್ ನಲ್ಲಿ ಕೋತಿಗಳು ಮರದ ಎಲೆಗಳನ್ನು ಜಿಂಕೆಗಳು ತಿನ್ನಲು ಅನುವು ಮಾಡಿಕೊಡುತ್ತಿರುವ ದೃಶವಿದು. ಪ್ರಾಣಿ ಪ್ರಪಂಚದ ಅನ್ಯೋನ್ಯತೆ, ಸಹಬಾಳ್ವೆಗೆ ಇದೊಂದು ದೃಶ್ಯ ಪ್ರತಿರೂಪದಂತಿದೆ.
ಮಂಗನಿಗೂ, ಜಿಂಕೆಗಳಿಗೂ ಎಲ್ಲಿಂದೆಲ್ಲಿಯ ಅನುಬಂಧ….ಬೇರೆ ಬೇರೆ ಪ್ರಭೇಧಗಳಾಗಿದ್ದರೂ ಕೂಡಿ ಬಾಳುವ ಸಹಬಾಳ್ವೆಯ ಪಾಠವನ್ನು ಪ್ರಕೃತಿ ಮಾತೆ ಈ ದೃಶ್ಯದ ಮೂಲಕ ಮನುಷ್ಯನಿಗೆ ಹೇಳಿದಂತಿದೆ.