alex Certify ‘ಊ ಅಂಟವಾ……’ ಹಾಡಿಗೆ ಬೆಲ್ಲಿ ಡ್ಯಾನ್ಸ್….! ಮಹಿಳೆಯರ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಊ ಅಂಟವಾ……’ ಹಾಡಿಗೆ ಬೆಲ್ಲಿ ಡ್ಯಾನ್ಸ್….! ಮಹಿಳೆಯರ ವಿಡಿಯೋ ವೈರಲ್

ಟಾಲಿವುಡ್​ ನಟ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ ತೆಲುಗು ಬ್ಲಾಕ್​ ಬಸ್ಟರ್​ ಪುಷ್ಪಾ ದಿ ರೈಸ್ ಇನ್ನೂ ಸಹ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಲೆ ಏಳಿಸುತ್ತಲೇ ಇದೆ.

ಚಿತ್ರದ ಕ್ರೇಜ್​ ಭಾರತ ಅಥವಾ ವಿದೇಶದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೂಪದಲ್ಲಿ ಆವರಿಸಿಕೊಂಡಿದೆ. ಜನರು ಆ ಚಿತ್ರದ ಹಾಡುಗಳನ್ನು ಬಳಸಿ ಡ್ಯಾನ್ಸ್​ ರೀಲ್​ಗಳನ್ನು ಮಾಡುವುದು, ಅಲ್ಲು ಅರ್ಜುನ್​ ಅವರ ಸಂಭಾಷಣೆಗಳಿಗೆ ಲಿಪ್​ ಸಿಂಕ್​ ಮಾಡಿ ಖುಷಿಪಡುವುದಿದೆ.

ಇತ್ತೀಚೆಗೆ ನೋಯ್ಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೀರೆಯುಟ್ಟ ಮಹಿಳೆಯರ ಗುಂಪು ಬೆಲ್ಲಿ ಡ್ಯಾನ್ಸ್​ ಪ್ರದರ್ಶನವನ್ನು ಮಾಡುತ್ತಿರುವುದು ಕಂಡುಬಂದಿದೆ. ಸಮಂತಾ ಡ್ಯಾನ್ಸ್​ ಮಾಡಿರುವ ಓ ಅಂಟಾವಾ….. ಹಾಡಿಗೆ ಮೂವರು ಮಹಿಳೆಯರು ಸ್ಟೆಪ್​ ಹಾಕಿ ಕಿಚ್ಚು ಹಚ್ಚುವಂತಿದೆ.

ಮಧ್ಯದಲ್ಲಿರುವ ಮಹಿಳೆ ಖುಷಿ ಶರ್ಮಾ ಕೆಂಪು ಸೀರೆಯನ್ನು ಧರಿಸಿದ್ದರೆ, ಉಳಿದ ಇಬ್ಬರು ಮಹಿಳೆಯರು ಹಳದಿ ಕಿತ್ತಳೆ ಬಣ್ಣದ ಸೀರೆ ಧರಿಸಿದ್ದರು. ಖುಷಿ ಶರ್ಮಾ ಬೆಲ್ಲಿ ಡ್ಯಾನ್ಸ್​ ಶಿಕ್ಷಕಿಯಾಗಿದ್ದಾರೆ. ಅವರ ಇಬ್ಬರು ವಿದ್ಯಾರ್ಥಿಗಳೊಂದಿಗೆ ಈವೆಂಟ್​ನಲ್ಲಿ ಪ್ರದರ್ಶನ ನೀಡಿದರು.

ಊ ಅಂಟಾವಾ ನಂತರ, ಈ ಮೂವರು – ಅಕ್ಷಯ್​ ಕುಮಾರ್​ ಮತ್ತು ಕತ್ರಿನಾ ಕೈಫ್​ ಅವರ ಫೇಮಸ್​ ಹಾಡು ಟಿಪ್​ ಟಿಪ್​ ಬರ್ಸಾ ಪಾನಿ…..ಗೆ ಬೆಲ್ಲಿ ಡ್ಯಾನ್ಸ್​ ಪ್ರದರ್ಶನ ನೀಡಿ, ಅಲ್ಲಿದ್ದವರನ್ನು ಹುರಿದುಂಬಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...