ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಕಳ್ಳಿಯೊಬ್ಬಳು ಪ್ರಯಾಣಿಕರ ಮೊಬೈಲ್ ಎಗರಿಸುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೆಟ್ರೋದ ಡೋರ್ನಲ್ಲಿ ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ನೋಡುತ್ತಾ ನಿಂತಿದ್ದು, ಆತನ ಎದುರು ಮೆಟ್ರೋ ಹತ್ತುವಂತೆ ಯುವತಿಯೊಬ್ಬರು ನಿಂತಿರುವುದು ವಿಡಿಯೋದ ಆರಂಭದಲ್ಲಿ ಕಾಣಿಸುತ್ತದೆ.
ಆ ವ್ಯಕ್ತಿ ತನ್ನ ಎದುರಿಗಿರುವವರು ಸಹ ಪ್ರಯಾಣಿಕರು ಇರಬಹುದೆಂದು ಸುಮ್ಮನಿದ್ದಾರೆ. ಆದರೆ, ಇನ್ನೇನು ಮೆಟ್ರೋ ಡೋರ್ ಕ್ಲೋಸ್ ಆಗುತ್ತಿದೆ ಎನ್ನುವಾಗ ಮಾಸ್ಕ್ ಧರಿಸಿದ್ದ ಯುವತಿ ಕ್ಷಣ ಮಾತ್ರದಲ್ಲಿ ಎದುರಿದ್ದ ವ್ಯಕ್ತಿಯ ಮೊಬೈಲ್ ಎಳೆದುಕೊಂಡು ಓಡಿಬಿಡುತ್ತಾಳೆ. ಮೊಬೈಲ್ ಕಳೆದುಕೊಂಡ ವ್ಯಕ್ತಿಗೆ ಹೊರಗೆ ಬರಲೂ ಸಾಧ್ಯವಿಲ್ಲ.
“ಖತಮ್ ಟಾಟಾ ಬೈ ಬೈ ಗಯಾ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಕೆಲವರು ಇದು ಸ್ಕ್ರಿಪ್ಟ್ ಎಂದು ಬರೆದರೆ ಮತ್ತೆ ಕೆಲವರು ಯುವತಿಯ ಚಾಕಚಕ್ಯತೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.