alex Certify ಜುಟ್ಟು ಹಿಡಿದು ಮಹಿಳಾಮಣಿಗಳ ಜಗಳ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜುಟ್ಟು ಹಿಡಿದು ಮಹಿಳಾಮಣಿಗಳ ಜಗಳ; ವಿಡಿಯೋ ವೈರಲ್

ಜುಟ್ಟು ಹಿಡಿದು ಸಾರ್ವಜನಿಕವಾಗಿ ಜಗಳ ಸಾಮಾನ್ಯವಾಗಿದ್ದ ಕಾಲವಿತ್ತು. ಅದರಲ್ಲೂ ಕುಡಿಯುವ ನೀರು ವಿಷಯದಲ್ಲಿ ಇದು ಕಾಮನ್​. ಆದರೆ ಇತ್ತೀಚೆಗೆ ಅಂತಹ ಪ್ರಸಂಗಗಳು ಬಲು ಅಪರೂಪ ಎಂದೇ ಹೇಳಬಹುದು.

ಇದೀಗ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ನಾಸಿಕ್​ ಬಳಿಯ ಪಿಂಪಲ್​ಗಾಂವ್​ ಟೋಲ್​ ಬೂತ್​ನಲ್ಲಿ ಮಹಿಳಾ ಪ್ರಯಾಣಿಕರು ಮತ್ತು ಟೋಲ್​ನ ಮಹಿಳಾ ಉದ್ಯೋಗಿ ನಡುವೆ ಮಾರಾಮಾರಿ ನಡೆದಿದೆ.

ಸೆಪ್ಟೆಂಬರ್​ 14 ರಂದು ಟೋಲ್​ ಪ್ಲಾಜಾದಲ್ಲಿ ಟೋಲ್​ ಪಾವತಿಗೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ವೀಡಿಯೊದಲ್ಲಿ, ಇಬ್ಬರು ಮಹಿಳೆಯರು ಪರಸ್ಪರ ತಳ್ಳಾಡುವ ಪರಸ್ಪರ ಜುಟ್ಟು ಹಿಡಿದು ಜಗ್ಗಾಡುವುದು, ಹೊಡೆಯುವ ಮತ್ತು ಎಳೆಯುತ್ತಿರುವುದನ್ನು ಕಾಣಬಹುದು.

ಸಣ್ಣ ಕಾರಣಕ್ಕಾಗಿ ಪರಸ್ಪರ ಜಗಳವಾಡುವುದು ಮತ್ತು ನಿಂದನೆ ಮಾಡುವುದನ್ನು ಸಹ ಕಾಣಬಹುದು. ಹಲವಾರು ವೀಕ್ಷಕರು ಮತ್ತು ಉದ್ಯೋಗಿಗಳು ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದಂತೆ ಅವರಿಬ್ಬರ ಬಡಿದಾಟವು ಹಲವಾರು ನಿಮಿಷಗಳವರೆಗೆ ನಡೆಯುತ್ತದೆ. ಅನೇಕರು ತಮ್ಮ ಮೊಬೈಲ್​ ಫೋನ್​ಗಳಲ್ಲಿ ಸಂಪೂರ್ಣ ಜಗಳವನ್ನು ರೆಕಾರ್ಡ್​ ಮಾಡುವುದನ್ನು ಸಹ ಕಾಣಬಹುದು.

ಸಿಆರ್​ಪಿಎಫ್​ ಅಧಿಕಾರಿಯಾಗಿರುವ ಮಹಿಳೆಯ ಪತಿ ಟೋಲ್​ ಬೂತ್​ ಮಹಿಳಾ ಉದ್ಯೋಗಿಯೊಂದಿಗೆ ಜಗಳವಾಡುತ್ತಿರುವುದನ್ನು ಸಹ ವೀಡಿಯೊ ತೋರಿಸುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ನಂತರ ಪೊಲೀಸರು ಜಗಳಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...