alex Certify ಬಾಂಗ್ಲಾ ಗಾಯಕಿಯೊಂದಿಗೆ ಹಾಡಿದ್ದ ವಿರಾಟ್ ಕೊಹ್ಲಿ ಹಳೆ ವಿಡಿಯೋ ವೈರಲ್: ನೆಟ್ಟಿಗರಿಂದ ಪ್ರಶಂಸೆಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಂಗ್ಲಾ ಗಾಯಕಿಯೊಂದಿಗೆ ಹಾಡಿದ್ದ ವಿರಾಟ್ ಕೊಹ್ಲಿ ಹಳೆ ವಿಡಿಯೋ ವೈರಲ್: ನೆಟ್ಟಿಗರಿಂದ ಪ್ರಶಂಸೆಗಳ ಸುರಿಮಳೆ

This Old Video of Virat Kohli Singing 'Jo Wada Kiya Woh' With Bangladeshi Singer is Going Viral, Seen It Yet?ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ಮಾತ್ರವಲ್ಲ ಹಾಡುವುದರಲ್ಲಿ ಕೂಡ ನಿಪುಣರೆಂದು ಬಹುಶಃ ಅನೇಕರಿಗೆ ತಿಳಿದಿಲ್ಲ. ಇದೀಗ ವಿರಾಟ್ ಕೊಹ್ಲಿ ಅವರು ‘ಜೋ ವಾದಾ ಕಿಯಾ ವೋ ನಿಭಾನಾ ಪಡೇಗಾ’ ಹಾಡನ್ನು ಹಾಡಿರುವ ಹಳೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ವಿರಾಟ್ ಕೊಹ್ಲಿ ಬಾಂಗ್ಲಾದೇಶದ ಗಾಯಕಿ ಫಹ್ಮಿದಾ ನಬಿಹಾಸ್ ಅವರೊಂದಿಗೆ ಸುಮಧುರ ಹಾಡನ್ನು ಹಾಡಿದ್ದಾರೆ. 2016 ರಲ್ಲಿ ಏಷ್ಯಾ ಕಪ್ ಟಿ-20 ಗಾಗಿ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊಹ್ಲಿ ಅವರು ನಬಿ ಅವರೊಂದಿಗೆ ಅದ್ಭುತ ಗೀತೆಯನ್ನು ಹಾಡಿದ್ದರು.

ಈ ಹಾಡನ್ನು ಮೂಲತಃ ತಾಜ್ ಮಹಲ್ ಚಿತ್ರದಲ್ಲಿ ದಿವಂಗತ ಲತಾ ಮಂಗೇಶ್ಕರ್ ಹಾಡಿದ್ದರು. ಜೋ ವಾದಾ ಕಿಯಾ ಹೈ ವೋ ನಿಭಾನ ಪಡೇಗಾದಲ್ಲಿ ಈ ಜೋಡಿಯ ಅಭಿನಯವು ಅದ್ಭುತವಾಗಿದೆ ! ಎಂಬ ಶೀರ್ಷಿಕೆಯೊಂದಿಗೆ ಸಾರೆಗಮ ಫೇಸ್ಬುಕ್ ಪುಟ ಈ ವಿಡಿಯೋವನ್ನು ಹಂಚಿಕೊಂಡಿದೆ.

ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದ್ದು, ಕ್ರಿಕೆಟಿಗನ ಸುಮಧುರ ಗಾಯನಕ್ಕೆ ನೆಟ್ಟಿಗರು ಮನಸೋತಿದ್ದಾರೆ. ವಿರಾಟ್ ಬಹಳ ಅದ್ಭುತವಾಗಿ ಹಾಡಿದ್ದಾರೆ. ಆತನಲ್ಲಿ ಎಲ್ಲಾ ಪ್ರತಿಭೆಯಿದ್ದು, ತನ್ನಿಂದ ಮಾಡಲಾಗುವುದಿಲ್ಲ ಅನ್ನೋದು ಏನೂ ಇಲ್ಲ. ವಿರಾಟ್ ರಿಂದ ಎಲ್ಲವೂ ಸಾಧ್ಯ ಅಂತಾ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಗಾಯನಕ್ಕೆ ನೆಟ್ಟಿಗರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...