ಯುಎಸ್ನ ಬಾಲ್ಟಿಮೋರ್ ಮೂಲದ ಕುಟುಂಬವೊಂದು ಜನಾಂಗೀಯ ತಾರತಮ್ಯವಾಗಿದೆ ಎಂದು ಅಮ್ಯೂಸ್ಮೆಂಟ್ ಪಾರ್ಕ್ ವಿರುದ್ಧ $25 ಮಿಲಿಯನ್ ಮೊತ್ತಕ್ಕೆ ಬೇಡಿಕೆ ಇಟ್ಟು ಮೊಕದ್ದಮೆ ಹೂಡಿದೆ.
ಜನಪ್ರಿಯ ಸೆಸೇಮ್ ಸ್ಟ್ರೀಟ್ ಶೋನಿಂದ ಪ್ರೇರಿತವಾದ ಫಿಲಡೆಲ್ಫಿಯಾದ ಅಮ್ಯೂಸ್ಮೆಂಟ್ ಪಾರ್ಕ್ ಅಮೆರಿಕಾದಲ್ಲಿ ಪ್ರಸಿದ್ಧವಾಗಿದೆ. ವರದಿಗಳ ಪ್ರಕಾರ, ಜೋಡಿ ಬ್ರೌನ್ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಅಮ್ಯೂಸ್ಮೆಂಟ್ ಪಾರ್ಕ್ಗೆ ಭೇಟಿ ನೀಡಿತ್ತು.
ಸ್ವಾಗತ ಮಾಡುವ ಸಂದರ್ಭದಲ್ಲಿ ಅನೇಕ ವೇಷಭೂಷಣದ ಪಾತ್ರಗಳು ತನ್ನ ಐದು ವರ್ಷದ ಮಗಳು ಮತ್ತು ಸೊಸೆಗೆ ಹೈ-ಫೈವ್ ಮಾಡಲು ನಿರಾಕರಿಸಿದವು.
ಜೋಡಿ ಬ್ರೌನ್ ಇನ್ಸ್ಟಾಗ್ರಾಮ್ಗೆ ಪೋಸ್ಟ್ ಮಾಡಿದ ಒಂಬತ್ತು ಸೆಕೆಂಡ್ಗಳ ವಿಡಿಯೋ, ರೋಸಿಟಾ ಎಂಬ ಪಾತ್ರವು ಬಿಳಿ ಜನರ ಮಗು ಮತ್ತು ಮಹಿಳೆಯನ್ನು ಹೈ-ಫೈವ್ ಮಾಡುವುದನ್ನು ತೋರಿಸಿದೆ, ನಂತರ ತನ್ನ ಕುಟುಂಬದ ಮಕ್ಕಳಿಗೆ ಹೈ-ಫೈವ್, ಹಗ್ ಮಾಡಲು ನಿರಾಕರಿಸಿ “ಇಲ್ಲ” ಎಂದು ಸನ್ನೆ ಮಾಡಿ ಮುಂದೆ ಸಾಗುತ್ತದೆ.
ಈ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ಅಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೆೈರಲ್ ಆಗಿದೆ. ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ಬಹಿಷ್ಕರಿಸುವಂತೆ ಕರೆ ನೀಡಿದರು.