ಇತ್ತೀಚಿನ ದಿನಗಳಲ್ಲಿ ಪಂಜಾಬ್ ಮಂದಿ ಕೆನಡಾಕ್ಕೆ ಸ್ಥಳಾಂತರಗೊಂಡಂತೆ ತೋರುತ್ತಿದ್ದರೆ, ಈ ಬಾರಿ ಕೆನಡಾ ಪಂಜಾಬ್ಗೆ ಬಂದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಕೆನಡಾದ ಆಹಾರ ಪಾನೀಯಗಳಿಗೆ ಹೆಸರುವಾಸಿಯಾಗಿರುವ ಟಿಮ್ ಹಾರ್ಟನ್ಸ್ ಪಂಜಾಬ್ಗೆ ಕಾಲಿಟ್ಟಿದ್ದು, ಜನರು ಫುಲ್ ಖುಷಿಯಾಗಿದ್ದಾರೆ. ಜನರು ಇದನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ.
ಟಿಮ್ ಹಾರ್ಟನ್ಸ್ ಭಾರತದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂಬ ಸುದ್ದಿಯೇ ಹಲವರಿಗೆ ರೋಮಾಂಚನವನ್ನುಂಟು ಮಾಡುತ್ತಿದೆ. ಇದಾಗಲೇ ದೆಹಲಿಯಲ್ಲಿ ಇದು ಎರಡು ಔಟ್ಲೆಟ್ಗಳನ್ನು ಶುರು ಮಾಡಿದೆ. ಗುರುಗ್ರಾಮದಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಶುರುವಾದ ಒಂದು ಔಟ್ಲೆಟ್ನಲ್ಲಿ ಕಾಫಿ ಪ್ರಿಯರು ಉತ್ಸಾಹದಿಂದ ಪಾಲ್ಗೊಂಡು ಕಾಫಿ ಹೀರಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಇದೀಗ ಪಂಜಾಬ್ನಲ್ಲಿಯೂ ಟಿಮ್ ಹಾರ್ಟನ್ಸ್ ತನ್ನ ಹವಾ ಸೃಷ್ಟಿ ಮಾಡಿದೆ.
ಪಂಜಾಬಿಗಳು ಕೆನಡಾದ ತ್ವರಿತ ಆಹಾರ ಸರಪಳಿಯನ್ನು ತಮ್ಮದೇ ಆದ ಶೈಲಿಯಲ್ಲಿ ಸ್ವಾಗತಿಸಿದ್ದಾರೆ. ಚಂಡೀಗಢದ ಇಂಡಸ್ಟ್ರಿಯಲ್ ಏರಿಯಾ ಫೇಸ್ I ನಲ್ಲಿರುವ ಎಲಾಂಟೆ ಮಾಲ್ನಲ್ಲಿರುವ ಟಿಮ್ ಹಾರ್ಟನ್ಸ್ನ ಉದ್ಯೋಗಿಗಳು ತಮ್ಮ ಸಮವಸ್ತ್ರವನ್ನು ಧರಿಸಿ ಇಲ್ಲಿಯ ಜನಪ್ರಿಯ ನೃತ್ಯ ಭಾಂಗ್ರಾ ಮೂಲಕ ಸ್ವಾಗತಿಸಿದ್ದಾರೆ. ಇದರ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.