
ಇಲ್ಲೊಂದು ಮಗು ಪಿಜ್ಜಾ ನೋಡಿ ಕೇಕೆಹಾಕಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದ್ದು, ಇದು ಎಲ್ಲಿಯದು ಎಂದು ತಿಳಿದು ಬಂದಿಲ್ಲ.
BIG NEWS: ʼಆಧಾರ್ ಕಾರ್ಡ್ʼ ನಂತೆ ಇನ್ಮುಂದೆ ಸಿಗಲಿದೆ ವಿಶಿಷ್ಟ ಆರೋಗ್ಯ ಕಾರ್ಡ್
ಆದರೆ, Good News Movement ಎಂಬ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಮಗುವಿನ ಸಂಭ್ರಮ ನೋಡಿದರೆ ಸಾಕು, ನಿಮ್ಮ ಮುಖದಲ್ಲಿ ನಗು ಮಿಂಚುವುದು ಖಂಡಿತ. ನೀವು ಕೂಡ ಪಿಜ್ಜಾ ಪ್ರೇಮಿಯಾಗಿದ್ದಲ್ಲಿ, ಈ ಮಗುವಿನ ಖುಷಿ ಅರ್ಥವಾಗುವುದರಲ್ಲಿ ಸಂದೇಹವಿಲ್ಲ.
ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ಹಾಸಿಗೆ ಮೇಲೆ ಕೂತಿದ್ದು, ಅದರ ಪಕ್ಕ ಪಿಜ್ಜಾ ಬಾಕ್ಸ್ ಇಡಲಾಗಿದೆ. ಬಾಕ್ಸ್ ತೆಗೆಯುತ್ತಿದ್ದಂತೆ, ಪಿಜ್ಜಾ ನೋಡಿ ಮಗು ತನ್ನ ಕೈಗಳೆರೆಡು ಅಲುಗಾಡಿಸಿ ಸಂಭ್ರಮಪಟ್ಟಿದೆ.
ಈ ವಿಡಿಯೋ ನೋಡಿ, ಪಿಜ್ಜಾ ಮೇಲಿನ ಬೆಣ್ಣೆಯಂತೆ ನಿಮ್ಮ ಮನಸ್ಸು ಕರಗದಿದ್ದರೆ ನೋಡಿ ಮತ್ತೆ ?