alex Certify ಪುಟ್ಟ ಬಾಲಕನ ಕ್ಯೂಟ್‌ ವಿಡಿಯೋ ನೋಡಿ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನ ಕ್ಯೂಟ್‌ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಸಂಗೀತವನ್ನು ಇಷ್ಟಪಡುವವರು ಹಲವರು. ಅದರಲ್ಲಿಯೂ ಕೆಲವೊಂದು ಸಿನಿಮಾಗಳ ಹಿಟ್​ ಹಾಡುಗಳಾದರೆ ಮುಗಿದೇ ಹೋಯ್ತು. ಅದರ ಅರ್ಥ ಗೊತ್ತಿಲ್ಲದಿದ್ದರೂ ಪುಟಾಣಿಗಳು ರಾಗವಾಗಿ ಹಾಡುವುದನ್ನು ನೋಡಬಹುದು. ಅಂಥದ್ದೇ ಒಂದು ಹಾಡನ್ನು ಹಾಡಿದ ಬಾಲಕ ಈಗ ವೈರಲ್​ ಆಗುತ್ತಿದ್ದಾನೆ.

ʼಟೈಗರ್ ಜಿಂದಾ ಹೈʼ ಚಿತ್ರದ ದಿಲ್ ದಿಯಾನ್ ಗಲ್ಲನ್ ಹಾಡನ್ನು ಈ ಪುಟ್ಟ ಬಾಲಕ ಹಾಡಿದ್ದಾನೆ. ರೊಮ್ಯಾಂಟಿಕ್​ ಆಗಿರುವ ಈ ಹಾಡನ್ನು ಹಾಡುತ್ತಲೇ ಬಾಲಕ ಅಳಲು ಶುರು ಮಾಡಿದ್ದಾನೆ. ನಾಯಕಿಯನ್ನು ನೆನೆದು ನಾಯಕ ಹಾಡುವ ಹಾಡು ಇದಾಗಿದ್ದು, ಅದನ್ನೇ ಬಾಲಕ ಅನುಸರಿಸಿದ್ದಾನೆ. ತನ್ನ ಹೃದಯವನ್ನು ಯಾವುದೇ ಹುಡುಗಿ ಚೂರು ಮಾಡಿದಂತೆ, ತನಗೆ ಆಕೆ ಮೋಸ ಮಾಡಿದಂತೆಯೇ ಕಲ್ಪನೆ ಮಾಡಿಕೊಂಡು ಈ ಬಾಲಕ ಹಾಡಿರುವ ಕ್ಯೂಟ್​ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ಕೈಕಟ್ಟಿಕೊಂಡು ಹಾಡು ಶುರು ಮಾಡುವ ಈ ಬಾಲಕ ಹಾಡುತ್ತಾ ಹಾಡುತ್ತಾ ಕಣ್ಣೀರು ಹಾಕಿದ್ದಾನೆ. ಸಾಹಿತ್ಯವನ್ನು ತನ್ನದೇ ಮುದ್ದುಮುದ್ದು ಭಾಷೆಯಲ್ಲಿ ತಪ್ಪಾಗಿ ಹೇಳುತ್ತಿದ್ದರೂ ಆತನ ದೈಹಿಕ ಭಾಷೆ ಹಾಗೂ ಕಣ್ಣೀರು ಹಾಕುವುದು ಮಾತ್ರ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದು ಯಾರಪ್ಪಾ ನಿನ್ನ ಹೃದಯ ಕದ್ದು ಮೋಸ ಮಾಡಿದವರು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...