alex Certify ಅಂಬೆಗಾಲಿಡುವ ಮಗುವಿನ ಸ್ನೋ ಬೋರ್ಡಿಂಗ್ ಆಟಕ್ಕೆ ನಿಬ್ಬೆರಗಾದ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಬೆಗಾಲಿಡುವ ಮಗುವಿನ ಸ್ನೋ ಬೋರ್ಡಿಂಗ್ ಆಟಕ್ಕೆ ನಿಬ್ಬೆರಗಾದ ಜನ…!

ಚೋಂಗ್ಲಿ: 11 ತಿಂಗಳ ಮಕ್ಕಳೆಂದರೆ ಅಂಬೆಗಾಲಿಟ್ಟು ಇನ್ನೇನು ಎದ್ದು ನಿಂತು ನಡೆಯಲು ತಯಾರಿ ನಡೆಸುತ್ತಿರುತ್ತಾರೆ. ಆದರೆ, ಇಲ್ಲೊಂದು 11 ತಿಂಗಳ ಹೆಣ್ಣುಮಗುವೊಂದು ಇನ್ನೂ ಕೂಡ ನಡೆಯಲು ಸಾಧ್ಯವಾಗದಿದ್ದರೂ, ಬಾಲೆಯ ಸ್ನೋಬೋರ್ಡಿಂಗ್ ಕೌಶಲ್ಯಕ್ಕೆ ಜನ ನಿಬ್ಬೆರಗಾಗಿದ್ದಾರೆ.

ಸದ್ಯ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಈ ಪುಟ್ಟ ಬಾಲೆ ವಾಂಗ್, ಚೀನಾ ದೇಶದ ಹುಬೈ ಪ್ರಾಂತ್ಯದ ಚೋಂಗ್ಲಿಯವಳು. ತನ್ನ ತಂದೆ-ತಾಯಿಯ ಮಾರ್ಗದರ್ಶನದೊಂದಿಗೆ ಸ್ನೋಬೋರ್ಡಿಂಗ್ ನಲ್ಲಿ ಜಾರುತ್ತಾಳೆ.

RBI ನ ಹೊಸ ಒಂಬುಡ್ಸ್‌ಮನ್‌ ಯೋಜನೆ: ಆನ್ಲೈನ್ ಮೂಲಕ ಸುಲಭವಾಗಿ ದೂರು ಸಲ್ಲಿಸಲು ಹೀಗೆ ಮಾಡಿ

ಮಗು ಸ್ನೋಬೋರ್ಡ್ ಮುಖಾಂತರ ಇಳಿಜಾರಿನ ಕೆಳಗೆ ಜಾರುತ್ತಿದ್ದರೆ, ತಂದೆಯು ಚಿಕ್ಕ ಹಗ್ಗದಿಂದ ಹಿಂದಿನಿಂದ ಅವಳ ಸ್ನೋಬೋರ್ಡ್ ಅನ್ನು ಹಿಡಿದಿದ್ದಾರೆ. ನಂತರ ಹಗ್ಗವನ್ನು ಬಿಟ್ಟು ಬಾಲೆಯನ್ನು ಅವಳಾಗಿಯೇ ಜಾರುವಂತೆ ನೋಡಿಕೊಂಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ಇನ್ನು ತಮ್ಮ ಮಗು ಸ್ನೋಬೋರ್ಡಿಂಗ್ ಅನ್ನು ಇಷ್ಟಪಡುವುದಾಗಿ ದಂಪತಿ ಹೇಳಿಕೊಂಡಿದ್ದಾರೆ. ಜೊತೆಗೆ ಮಗುವಿಗೆ ಮತ್ತಷ್ಟು ಸ್ಪೂರ್ತಿ, ಮಾರ್ಗದರ್ಶನ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...