alex Certify ಚಿರತೆಯ ವೇಗದ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರತೆಯ ವೇಗದ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಸಂಗತಿ

ಈ ಭೂಮಿಯ ಮೇಲೆ ಅತಿ ವೇಗವಾಗಿ ಓಡುವ ಪ್ರಾಣಿ ಚಿರತೆ ಎಂದು ಪರಿಚಿತ. ಆದರೆ, ಅದು ಯಾವ ಪರಿಯಾಗಿ ಜಿಗಿದು ಓಡುತ್ತದೆ ಎಂದು ಗೊತ್ತೇ ?

ಐಎಎಸ್​ ಅಧಿಕಾರಿ ಸುಸಾಂತ ನಂದ ಅವರು ಚಿರತೆಯ ಓಟದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಕೇವಲ ಮೂರು ಸೆಕೆಂಡುಗಳಲ್ಲಿ ಗಂಟೆಗೆ ಶೂನ್ಯದಿಂದ 60 ಮೈಲುಗಳಷ್ಟು (97 ಕಿಮೀ) ವೇಗವನ್ನು ತಲುಪು ಸಾಮರ್ಥ್ಯ ಹೊಂದಿರುತ್ತವೆ.

ಚಿರತೆಯ ಚೇಸ್​ ಸಾಮಾನ್ಯವಾಗಿ ಒಂದು ನಿಮಿಷಕ್ಕಿಂತ ಕಡಿಮೆ ಇರುತ್ತದೆ. ಅಂದರೆ 200-300 ಮೀಟರ್​ಗಳನ್ನು ಆವರಿಸುತ್ತದೆ. ಪೂರ್ಣ ವೇಗದಲ್ಲಿದ್ದ ಸಂದರ್ಭದಲ್ಲಿ ಚಿರತೆಯು ಪ್ರತಿ ಸೆಕೆಂಡಿಗೆ ಮೂರು ದಾಪುಗಾಲುಗಳನ್ನು ತೆಗೆದುಕೊಳ್ಳುತ್ತದೆ, ಪ್ರತಿ ಹೆಜ್ಜೆಗೆ ಏಳು ಮೀಟರ್​ಗಳನ್ನು ಕ್ರಮಿಸುತ್ತದೆ. ಈ ಸಂಗತಿಗಳು ಕೇಳಲು ಆಕರ್ಷಕವೆನಿಸಿದರೂ ಬೇಟೆಯಾಡುವ ಸಮಯದಲ್ಲಿ ಚಿರತೆಯನ್ನು ನೋಡಲು ಇನ್ನೂ ಹೆಚ್ಚು ಆಕರ್ಷಕ.

ಚಿರತೆಯೊಂದು ಅತಿವೇಗದಲ್ಲಿ ಓಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿರುವ ವಿಡಿಯೋವೊಂದನ್ನು ಅಧಿಕಾರಿ ಸುಸಾಂತ ನಂದ ಹಂಚಿಕೊಂಡಿದ್ದು, ಅವರು ಮಾಡಿರುವ ಪೋಸ್ಟ್​ ಇದುವರೆಗೆ 72 ಸಾವಿರ ವೀಕ್ಷಣೆ ಪಡೆದುಕೊಂಡಿದೆ.

ಬೇಟೆ ಹಿಡಿಯಲು ಮೈದಾನದಲ್ಲಿ ಓಡುತ್ತಿರುವ ಚಿರತೆಯು ದಾಪುಗಾಲಿಡುತ್ತಾ ಜಿಗಿದು ಓಡುವುದನ್ನು ನೋಡಿದರೆ ಮೈ ನವಿರೇಳುತ್ತದೆ. ಚಿರತೆಯ ವೇಗ ಗಂಟೆಗೆ 130 ಕಿ.ಮೀ.ರಷ್ಟಿತ್ತೆಂದು ಆ ಅಧಿಕಾರ ಹೇಳಿಕೊಂಡಿದ್ದಾರೆ. ಚಿರತೆಯ ಓಟವನ್ನು ನೋಡಿ ಮಂತ್ರಮುಗ್ಧರಾದ ನೆಟ್ಟಿಗರು ಪ್ರಕೃತಿ ವಿಸ್ಮಯ ಕೊಂಡಾಡಿ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...