
ಅಫ್ಘಾನಿಸ್ತಾನವನ್ನು ಇಡಿಯಾಗಿ ಕೈಗೆ ಪಡೆದ ತಾಲಿಬಾನೀ ಪಡೆಗಳು ಅಲ್ಲಿನ ಸಂಸತ್ತಿನ ಭವನಕ್ಕೂ ನುಗ್ಗಿವೆ. ಭಾರತದ ನೆರವಿನಿಂದ ನಿರ್ಮಿಸಲಾಗಿರುವ ಸಂಸತ್ ಕಟ್ಟಡದಲ್ಲಿ ಬಂದೂಕುಧಾರಿ ತಾಲಿಬಾನಿಗಳು ಆವರಿಸಿದ್ದಾರೆ.
ಜಂಟಿ ಅಧಿವೇಶನಕ್ಕೆಂದು ಅಫ್ಘಾನಿಸ್ತಾನದ ಜನನಾಯಕ ಅಶ್ರಫ್ ಘನಿ ಹಾಗೂ ಜನಪ್ರತಿನಿಧಿಗಳು ಎರಡು ವಾರಗಳ ಹಿಂದೆ ಕುಳಿತಿದ್ದ ಸಂಸತ್ತಿನ ಕುರ್ಚಿಗಳ ಮೇಲೆ ತಾಲಿಬ್‌ಗಳು ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ʼಮಚ್ಚೆ ಎಳ್ಳನ್ನುʼ ಸುಲಭವಾಗಿ ತೆಗೆದು ಹಾಕುತ್ತೆ ಈ ಮನೆ ಮದ್ದು
ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು ಅಧ್ಯಕ್ಷ ಅಶ್ರಫ್ ಘನಿ ವಿದೇಶಕ್ಕೆ ಪಲಾಯನವಾಗುತ್ತಲೇ ತಾಲಿಬಾನೀ ಪಡೆಗಳು ಕಾಬೂಲ್‌ಅನ್ನು ಆಕ್ರಮಿಸಿಕೊಂಡಿವೆ. ಈ ಮೂಲಕ 20 ವರ್ಷಗಳ ಅವಧಿಯಲ್ಲಿ ಅಫ್ಘಾನಿಸ್ತಾನವನ್ನು ಮರು ನಿರ್ಮಾಣ ಮಾಡುವ ಅಮೆರಿಕದ ಪ್ರಯತ್ನವೆಲ್ಲಾ ಹೊಳೆಯಲ್ಲಿ ಕಿವುಚಿದ ಹುಣಸೇಹಣ್ಣಿನಂತೆ ಆಗಿದೆ.