alex Certify ʼಮಚ್ಚೆ ಎಳ್ಳನ್ನುʼ ಸುಲಭವಾಗಿ ತೆಗೆದು ಹಾಕುತ್ತೆ ಈ ಮನೆ ಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಚ್ಚೆ ಎಳ್ಳನ್ನುʼ ಸುಲಭವಾಗಿ ತೆಗೆದು ಹಾಕುತ್ತೆ ಈ ಮನೆ ಮದ್ದು

ಮುಖದ ಮೇಲಿರುವ ಮಚ್ಚೆ ಅಥವಾ ಸಣ್ಣ ಕಪ್ಪು ಚುಕ್ಕೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಅನೇಕರ ಮುಖದಲ್ಲಿ ಸಣ್ಣ ಕಪ್ಪು ಚುಕ್ಕೆಗಳು (ಎಳ್ಳು) ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ತುಟಿಯಂಚಿನಲ್ಲೊಂದು ಮಚ್ಚೆ ಇದ್ರೆ ಅದು ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತೆ.

ಆದ್ರೆ ಮುಖದ ತುಂಬೆಲ್ಲ ಮಚ್ಚೆ ಕಾಣಿಸಿಕೊಂಡ್ರೆ ಚಿಂತೆ ಕಾಡಲು ಶುರುವಾಗುತ್ತದೆ. ಅನೇಕ ಹುಡುಗಿಯರು ಶಸ್ತ್ರಚಿಕಿತ್ಸೆಯ ಮೊರೆ ಹೋಗ್ತಾರೆ. ಆದ್ರೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.

ವಿನೆಗರ್ : ಹತ್ತಿಯ ಸಹಾಯದಿಂದ ಮಚ್ಚೆಯಿರುವ ಜಾಗಕ್ಕೆ ವಿನೆಗರ್ ಹಚ್ಚಿಕೊಳ್ಳಿ. 10-15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ಕೆಲ ದಿನ ಸತತವಾಗಿ ವಿನೆಗರ್ ಹಚ್ಚಿಕೊಂಡ್ರೆ ಮಚ್ಚೆ ಉದುರಿ ಬೀಳಲಿದೆ.

ರೋಸ್ ವಾಟರ್ : ರೋಸ್ ವಾಟರನ್ನು ಸ್ವಲ್ಪ ಸಮಯ ಬಿಸಿಲಿಗೆ ಇಡಿ. ನಂತ್ರ ಮಚ್ಚೆಯಿರುವ ಜಾಗಕ್ಕೆ ಹಚ್ಚಿ. ಇದ್ರಿಂದ ಸಣ್ಣ ಕಪ್ಪು ಕಲೆಗಳು ಹೊಳಪು ಕಳೆದುಕೊಂಡು ಚರ್ಮ ಸ್ವಚ್ಛವಾಗುತ್ತ ಬರುತ್ತದೆ.

ಬೆಳ್ಳುಳ್ಳಿ : ಬೆಳ್ಳುಳ್ಳಿಯ ಒಂದು ಮೊಗ್ಗನ್ನು ತೆಗೆದುಕೊಂಡು ಅದನ್ನು ಮೊಡವೆಯಿರುವ ಜಾಗಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತ್ರ ಸ್ವಚ್ಛಗೊಳಿಸಿ.

ಆಲದ ಎಲೆ : ಆಲದ ಎಲೆಯ ರಸವನ್ನು ತೆಗೆಯಿರಿ. ಅದನ್ನು ಮಚ್ಚೆಯಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಇದ್ರಿಂದ ಚರ್ಮ ಮೃದುವಾಗುತ್ತದೆ.

ಈರುಳ್ಳಿ ರಸ : ಮಚ್ಚೆಗೆ ಈರುಳ್ಳಿ ರಸವನ್ನು ಹಚ್ಚಿ ಸ್ವಲ್ಪ ಹೊತ್ತು ಬಿಡಿ. ನಂತ್ರ ತಣ್ಣನೆ ನೀರಿನಲ್ಲಿ ಸ್ವಚ್ಛಗೊಳಿಸಿ. ಇದು ಮಚ್ಚೆ ಹಾಗೂ ಸಣ್ಣ ಕಪ್ಪು ಕಲೆಯನ್ನು ತೆಗೆದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...