alex Certify ಇಲ್ಲಿದೆ ತಾಲಿಬಾನ್‌ ಉಗ್ರರ ವೈರಲ್‌ ವಿಡಿಯೋ ಹಿಂದಿನ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ತಾಲಿಬಾನ್‌ ಉಗ್ರರ ವೈರಲ್‌ ವಿಡಿಯೋ ಹಿಂದಿನ ಸತ್ಯ

Viral Video Shows Taliban Fighter Attached to Helicopter Trying to Put a Flag, Not a Body

ಅಫ್ಘಾನಿಸ್ತಾನದ ಕಂದಹಾರ್‌‌ನ ಆಗಸದಲ್ಲಿ ಹಾರುತ್ತಿರುವ ಹೆಲಿಕಾಪ್ಟರ್‌ಗೆ ನೇತುಹಾಕಿಕೊಂಡಿರುವ ವ್ಯಕ್ತಿಯೊಬ್ಬನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

12 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಅಮೆರಿಕದ ಬ್ಲಾಕ್ ಹಾಕ್ ಹೆಲಿಕಾಪ್ಟರ್‌ಗೆ ಹಗ್ಗದಿಂದ ನೇತುಹಾಕಿಕೊಂಡಿರುವ ವ್ಯಕ್ತಿಯ ಕುರಿತು ತಪ್ಪು ಮಾಹಿತಿಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸಲಾಗಿತ್ತು. ಅಫ್ಘಾನಿಸ್ತಾನದಿಂದ ಅಮೆರಿಕ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಹಿಂದೆ ಸರಿದ ಕೂಡಲೇ ಈ ವಿಡಿಯೋ ಶೇರ್‌ ಮಾಡಲಾಗಿತ್ತು.

ಎಐಎಡಿಎಂಕೆ ನಾಯಕ ಪನ್ನೀರ್ ಸೆಲ್ವಂ ಪತ್ನಿ ವಿಜಯಲಕ್ಷ್ಮೀ ಕೊನೆಯುಸಿರು

ಆದರೆ ಈ ಘಟನೆಯ ಕುರಿತು ಪರಾಮರ್ಶೆ ಮಾಡಿರುವ ಬಿಬಿಸಿ ಹಾಗೂ ಮತ್ತೊಂದು ಸುದ್ದಿ ಸಂಸ್ಥೆ, ಹೆಲಿಕಾಪ್ಟರ್‌ಗೆ ನೇತಹಾಕಿಕೊಂಡಿರುವ ವ್ಯಕ್ತಿ ಬದುಕಿದ್ದು, ಕಂದಹಾರ್‌ನಲ್ಲಿರುವ ರಾಜ್ಯಪಾಲರ ಭವನದ ಮೇಲೆ ತಾಲಿಬಾನ್ ಧ್ವಜ ಹಾರಿಸಲು ಆತ ಹೀಗೆ ನೇತುಹಾಕಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ.

ಈ ವಿಡಿಯೋದ ಫುಟೇಜ್‌ನಲ್ಲಿ ಕಂಡಂತೆ, ಆ ವ್ಯಕ್ತಿಯ ಕೈಯಲ್ಲಿ ಧ್ವಜವೊಂದು ಇದ್ದು, ಆತ ಜೀವಂತವಿರುವುದು ಸಹ ಸ್ಪಷ್ಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...