ಅಫ್ಘಾನಿಸ್ತಾನದ ಕಂದಹಾರ್ನ ಆಗಸದಲ್ಲಿ ಹಾರುತ್ತಿರುವ ಹೆಲಿಕಾಪ್ಟರ್ಗೆ ನೇತುಹಾಕಿಕೊಂಡಿರುವ ವ್ಯಕ್ತಿಯೊಬ್ಬನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
12 ಸೆಕೆಂಡ್ಗಳ ಈ ವಿಡಿಯೋದಲ್ಲಿ ಅಮೆರಿಕದ ಬ್ಲಾಕ್ ಹಾಕ್ ಹೆಲಿಕಾಪ್ಟರ್ಗೆ ಹಗ್ಗದಿಂದ ನೇತುಹಾಕಿಕೊಂಡಿರುವ ವ್ಯಕ್ತಿಯ ಕುರಿತು ತಪ್ಪು ಮಾಹಿತಿಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸಲಾಗಿತ್ತು. ಅಫ್ಘಾನಿಸ್ತಾನದಿಂದ ಅಮೆರಿಕ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಹಿಂದೆ ಸರಿದ ಕೂಡಲೇ ಈ ವಿಡಿಯೋ ಶೇರ್ ಮಾಡಲಾಗಿತ್ತು.
ಎಐಎಡಿಎಂಕೆ ನಾಯಕ ಪನ್ನೀರ್ ಸೆಲ್ವಂ ಪತ್ನಿ ವಿಜಯಲಕ್ಷ್ಮೀ ಕೊನೆಯುಸಿರು
ಆದರೆ ಈ ಘಟನೆಯ ಕುರಿತು ಪರಾಮರ್ಶೆ ಮಾಡಿರುವ ಬಿಬಿಸಿ ಹಾಗೂ ಮತ್ತೊಂದು ಸುದ್ದಿ ಸಂಸ್ಥೆ, ಹೆಲಿಕಾಪ್ಟರ್ಗೆ ನೇತಹಾಕಿಕೊಂಡಿರುವ ವ್ಯಕ್ತಿ ಬದುಕಿದ್ದು, ಕಂದಹಾರ್ನಲ್ಲಿರುವ ರಾಜ್ಯಪಾಲರ ಭವನದ ಮೇಲೆ ತಾಲಿಬಾನ್ ಧ್ವಜ ಹಾರಿಸಲು ಆತ ಹೀಗೆ ನೇತುಹಾಕಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ.
ಈ ವಿಡಿಯೋದ ಫುಟೇಜ್ನಲ್ಲಿ ಕಂಡಂತೆ, ಆ ವ್ಯಕ್ತಿಯ ಕೈಯಲ್ಲಿ ಧ್ವಜವೊಂದು ಇದ್ದು, ಆತ ಜೀವಂತವಿರುವುದು ಸಹ ಸ್ಪಷ್ಟವಾಗಿದೆ.
https://twitter.com/sudhirchaudhary/status/1432598354521772035