
ಜೀವನವು ಎಂದಿಗೂ ಸುಲಭವಲ್ಲ, ಹಾಗೆಂದು ಕಷ್ಟವೂ ಅಲ್ಲ. ಆಯಾವುದೇ ರೀತಿಯ ದೈಹಿಕ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಇದು ಸ್ವಲ್ಪ ಕಷ್ಟಕರವಾಗಿರುತ್ತದೆ. ಆದರೆ, ಸಂಕಲ್ಪ ಮತ್ತು ಇಚ್ಛಾಶಕ್ತಿಯಿಂದ, ದೈಹಿಕ ನ್ಯೂನ್ಯತೆಗಳನ್ನು ಜಯಿಸಬಹುದು.
ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಶೇರ್ ಮಾಡಿರುವ ವಿಡಿಯೋ ಈ ಮಾತಿಗೆ ಪುಷ್ಟಿ ನೀಡುತ್ತದೆ.
ವಿಶೇಷ ಸಾಮರ್ಥ್ಯದ ಹುಡುಗನೊಬ್ಬ ಪೇಂಟಿಂಗ್ ಮಾಡುತ್ತಿದ್ದು, ಆತನ ಮೊಣಕೈಯಲ್ಲಿ ಬ್ರಶ್ ಬಳಸುವುದನ್ನು 9 ಸೆಕೆಂಡ್ ಗಳ ವಿಡಿಯೋದಲ್ಲಿ ನೋಡಬಹುದು. ವಿಡಿಯೊವನ್ನು ಸೆಪ್ಟೆಂಬರ್ 6 ರಂದು ಹಂಚಿಕೊಳ್ಳಲಾಗಿದೆ,
ಇದು 69,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಈ ಹುಡುಗನ ಸಂಕಲ್ಪದ ಬಗ್ಗೆ ಸಾಮಾಜಿಕ ತಾಲತಾಣ ಬಳಕೆದಾರರು ಪ್ರಭಾವಿತರಾಗಿದ್ದಾರೆ. ಕೆಲವರು ಅಂತಹುದೇ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಕೈ ಮತ್ತು ಕಾಲುಗಳಿಲ್ಲದ ವ್ಯಕ್ತಿಯ ಪ್ರತಿ ಕೆಲಸವನ್ನು ಸುಲಭವಾಗಿ ಮಾಡುವ ವಿಡಿಯೊವನ್ನು ಒಬ್ಬರು ಹಂಚಿಕೊಂಡಿದ್ದರೆ, ತನ್ನ ತುಟಿ ಮತ್ತು ಮೂಗಿನ ಸಹಾಯದಿಂದ ಟೈಪ್ ಮಾಡುತ್ತಿದ್ದ ಇನ್ನೊಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ.
2020 ರಲ್ಲಿ ಕೈಗಳಿಲ್ಲದ ಆದರೆ ಕಾಲಿನಿಂದ ಚಿತ್ರಿಸುವ ಗೋಕರನ್ ಪಾಟೀಲ್ ಎಂಬ ಹುಡುಗನ ವಿಡಿಯೊವನ್ನು ಐಎಎಸ್ ಅಧಿಕಾರಿ ಪ್ರಿಯಾಂಕಾ ಶುಕ್ಲಾ ಹಂಚಿಕೊಂಡಿದ್ದರು. ಗೋಕರನ್ ಕೂಡ ಶ್ರವಣ ದೋಷದಿಂದ ಬಳಲುತ್ತಿದ್ದ.
https://twitter.com/VinaySinghUSA/status/1567372625080455169?ref_src=twsrc%5Etfw%7Ctwcamp%5Etweetembed%7Ctwterm%5E1567372625080455169%7Ctwgr%5E3575f2b17805420db5f5767b2e5f0179c8d5223f%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fviral-video-shows-specially-abled-boys-mesmerising-paintings-skills-5912563.html