alex Certify ʼಕ್ವಾರಂಟೈನ್‌ʼ ಗೆ ಹೆದರಿ ಐಕಿಯಾ ಮಳಿಗೆಯಿಂದ ದಿಕ್ಕಾಪಾಲಾಗಿ ಓಡಿದ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕ್ವಾರಂಟೈನ್‌ʼ ಗೆ ಹೆದರಿ ಐಕಿಯಾ ಮಳಿಗೆಯಿಂದ ದಿಕ್ಕಾಪಾಲಾಗಿ ಓಡಿದ ಜನ…!

ಚೀನಾದ ಶಾಂಘೈನಲ್ಲಿರುವ ಐಕಿಯಾ ಮಳಿಗೆಯಿಂದ ಶಾಪರ್​ಗಳು ದಬ್ಬಿಕೊಂಡು ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂಗಡಿಯೊಳಗೆ ಬಲವಂತವಾಗಿ ಕ್ವಾರಂಟೈನ್​ ಮಾಡಲು ಪ್ರಯತ್ನಿಸುತ್ತಿದ್ದ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಪ್ರಯತ್ನಿಸಿದ್ದು, ಇದು ತಳ್ಳಾಟಕ್ಕೆ ಕಾರಣವಾಗಿದೆ.

ಆಗಸ್ಟ್​ 13ರಂದು ಕ್ಸುಹುಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೋವಿಡ್​ -19 ಪ್ರಕರಣದ ಕ್ಲೋಸ್​ ಕಾಂಟ್ಯಾಕ್ಟ್​ ಪತ್ತೆಹಚ್ಚಿದ ನಂತರ ವೈರಸ್​ ಹರಡುವುದನ್ನು ತಡೆಗಟ್ಟಲು ಆರೋಗ್ಯ ಅಧಿಕಾರಿಗಳು ಇಡೀ ಮಳಿಗೆಯನ್ನು ಲಾಕ್​ ಮಾಡಲು ಪ್ರಯತ್ನಿಸಿದ್ದರು. ಈ ವೇಳೆ ಗ್ರಾಹಕರು ಮಳಿಗೆಯಿಂದ ಹೊರಬರಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ.

ಬಾಗಿಲು ಮುಚ್ಚಲು ಪ್ರಯತ್ನಿಸುತ್ತಿರುವ ಭದ್ರತಾ ಸಿಬ್ಬಂದಿಯನ್ನು ತಳ್ಳಿಕೊಂಡು ಹೊರಬಂದ ಜನ ದಿಕ್ಕಾಪಾಲಾಗಿ ಓಡಿದರು. ಈ ವೇಳೆ ಉದ್ರಿಕ್ತರಾದವರು ಅರಚುವುದು ಸಹ ಕಾಣಬಹುದು. ಮಳಿಗೆಯಲ್ಲಿದ್ದವರನ್ನು ಕಾನ್ಸಂಟ್ರೇಶನ್​ ಕ್ಯಾಂಪ್​ಗೆ ಕಳುಹಿಸಬಹುದಾದ ಸಾಧ್ಯತೆ ಇತ್ತು ಎಂದು ಟ್ವಿಟರ್​ ಬಳಕೆದಾರರು ವಿಡಿಯೊ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಶಾಂಘೈ ನಲ್ಲಿರುವ ಐಕಿಯಾದಲ್ಲಿ ಅಸಹಜ ಆರೋಗ್ಯ ಕೋವಿಡ್​ ಪ್ರಕರಣ ಕಂಡುಬಂದ ಕಾರಣ ಮತ್ತು ಇಡೀ ಮಾಲ್​ ಅನ್ನು ನಿರ್ಬಂಧಿಸಲು ಸ್ಥಳೀಯ ಆಡಳಿತ ಮುಂದಾಯಿತು. ಈ ಬಗ್ಗೆ ಐಕಿಯಾ ಇನ್ನೂ ಹೇಳಿಕೆ ನೀಡಿಲ್ಲ.

ಶಾಂಘೈ ಆರೋಗ್ಯ ಆಯೋಗದ ಉಪ ನಿರ್ದೇಶಕ ಝಾಮೋ ದಂಡನ್​ “ಶಾಪ್​ ಮತ್ತು ಸೋಂಕಿತ ಪ್ರದೇಶ” ಎರಡು ದಿನಗಳವರೆಗೆ ಕ್ಲೋಸ್ಡ್​ ಲೂಪ್​ ನಿರ್ವಹಣೆಯಲ್ಲಿರುತ್ತದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...