ಚೀನಾದ ಶಾಂಘೈನಲ್ಲಿರುವ ಐಕಿಯಾ ಮಳಿಗೆಯಿಂದ ಶಾಪರ್ಗಳು ದಬ್ಬಿಕೊಂಡು ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಗಡಿಯೊಳಗೆ ಬಲವಂತವಾಗಿ ಕ್ವಾರಂಟೈನ್ ಮಾಡಲು ಪ್ರಯತ್ನಿಸುತ್ತಿದ್ದ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಪ್ರಯತ್ನಿಸಿದ್ದು, ಇದು ತಳ್ಳಾಟಕ್ಕೆ ಕಾರಣವಾಗಿದೆ.
ಆಗಸ್ಟ್ 13ರಂದು ಕ್ಸುಹುಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೋವಿಡ್ -19 ಪ್ರಕರಣದ ಕ್ಲೋಸ್ ಕಾಂಟ್ಯಾಕ್ಟ್ ಪತ್ತೆಹಚ್ಚಿದ ನಂತರ ವೈರಸ್ ಹರಡುವುದನ್ನು ತಡೆಗಟ್ಟಲು ಆರೋಗ್ಯ ಅಧಿಕಾರಿಗಳು ಇಡೀ ಮಳಿಗೆಯನ್ನು ಲಾಕ್ ಮಾಡಲು ಪ್ರಯತ್ನಿಸಿದ್ದರು. ಈ ವೇಳೆ ಗ್ರಾಹಕರು ಮಳಿಗೆಯಿಂದ ಹೊರಬರಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ.
ಬಾಗಿಲು ಮುಚ್ಚಲು ಪ್ರಯತ್ನಿಸುತ್ತಿರುವ ಭದ್ರತಾ ಸಿಬ್ಬಂದಿಯನ್ನು ತಳ್ಳಿಕೊಂಡು ಹೊರಬಂದ ಜನ ದಿಕ್ಕಾಪಾಲಾಗಿ ಓಡಿದರು. ಈ ವೇಳೆ ಉದ್ರಿಕ್ತರಾದವರು ಅರಚುವುದು ಸಹ ಕಾಣಬಹುದು. ಮಳಿಗೆಯಲ್ಲಿದ್ದವರನ್ನು ಕಾನ್ಸಂಟ್ರೇಶನ್ ಕ್ಯಾಂಪ್ಗೆ ಕಳುಹಿಸಬಹುದಾದ ಸಾಧ್ಯತೆ ಇತ್ತು ಎಂದು ಟ್ವಿಟರ್ ಬಳಕೆದಾರರು ವಿಡಿಯೊ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಶಾಂಘೈ ನಲ್ಲಿರುವ ಐಕಿಯಾದಲ್ಲಿ ಅಸಹಜ ಆರೋಗ್ಯ ಕೋವಿಡ್ ಪ್ರಕರಣ ಕಂಡುಬಂದ ಕಾರಣ ಮತ್ತು ಇಡೀ ಮಾಲ್ ಅನ್ನು ನಿರ್ಬಂಧಿಸಲು ಸ್ಥಳೀಯ ಆಡಳಿತ ಮುಂದಾಯಿತು. ಈ ಬಗ್ಗೆ ಐಕಿಯಾ ಇನ್ನೂ ಹೇಳಿಕೆ ನೀಡಿಲ್ಲ.
ಶಾಂಘೈ ಆರೋಗ್ಯ ಆಯೋಗದ ಉಪ ನಿರ್ದೇಶಕ ಝಾಮೋ ದಂಡನ್ “ಶಾಪ್ ಮತ್ತು ಸೋಂಕಿತ ಪ್ರದೇಶ” ಎರಡು ದಿನಗಳವರೆಗೆ ಕ್ಲೋಸ್ಡ್ ಲೂಪ್ ನಿರ್ವಹಣೆಯಲ್ಲಿರುತ್ತದೆ ಎಂದು ಹೇಳಿದರು.
https://twitter.com/DonnaWongHK/status/1558906540458795008?ref_src=twsrc%5Etfw%7Ctwcamp%5Etweetembed%7Ctwterm%5E1558906540458795008%7Ctwgr%5Ef4788b2be74b34424ba6d2da50c6064a91adf7a9%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fviral-video-shows-people-pushing-their-way-out-of-ikea-store-in-china-here-s-why-1988287-2022-08-15