alex Certify ಕುಟುಂಬ ಭೋಜನಕ್ಕೆ ಸಮಯ ನೀಡಲು ತಾಯಿಯೊಬ್ಬರು ಮಾಡಿದ್ರು ಉಪಾಯ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬ ಭೋಜನಕ್ಕೆ ಸಮಯ ನೀಡಲು ತಾಯಿಯೊಬ್ಬರು ಮಾಡಿದ್ರು ಉಪಾಯ; ವಿಡಿಯೋ ವೈರಲ್

ನೀವು ಅವಿಭಕ್ತ ಕುಟುಂಬದಲ್ಲಿ ಬೆಳೆದವರಾಗಿದ್ದರೆ, ಕುಟುಂಬ ಸಮೇತರಾಗಿ ಊಟ ಮಾಡುವುದು ಎಷ್ಟು ಖುಷಿ ಕೊಡುತ್ತದೆ ಎಂಬುದು ನಿಮಗೆ ತಿಳಿದಿರುತ್ತದೆ. ಅದೇ ಈಗಿನ ವಿಭಕ್ತ ಕುಟುಂಬದಲ್ಲಿ, ಅದರಲ್ಲೂ ಮೊಬೈಲ್ ಯುಗದಲ್ಲಿ ಈ ಸಂತೋಷ ಕಾಣಸಿಗುವುದೇ ಇಲ್ಲ.

ಎಲ್ಲರೂ ಮೊಬೈಲ್ ನೋಡಿಕೊಂಡು, ಇಲ್ಲವೇ ಟಿವಿ ನೋಡಿಕೊಂಡು ಊಟ ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಮಕ್ಕಳು ಕೂಡ ಸ್ಮಾರ್ಟ್ ಫೋನ್ ಗಳಲ್ಲೇ ಕಾಲ ಕಳೆಯುತ್ತಿರುವುದು ಹೆಚ್ಚಾಗಿದೆ. ಕುಟುಂಬವು ಜೊತೆಯಾಗಿ ಊಟ ಮಾಡುವುದು ಎಷ್ಟು ಖುಷಿಕೊಡುತ್ತದೆ ಎಂಬ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ಮೂಲಕ ಸ್ಕ್ರೋಲ್ ಮಾಡದೆ ಕುಟುಂಬವು ಜೊತೆಯಾಗಿ ಊಟ ಮಾಡಲು ತಾಯಿಯೊಬ್ಬರು ಮಾಡಿರುವ ಉಪಾಯವನ್ನು ಹಂಚಿಕೊಳ್ಳಲಾಗಿದೆ. ಊಟ ಮಾಡಲು ತಮ್ಮ ತಟ್ಟೆಗೆ ಆಹಾರವನ್ನು ಬಡಿಸುವ ಮೊದಲು ಕುಟುಂಬದ ಪ್ರತಿಯೊಬ್ಬ ಸದಸ್ಯರು ತಮ್ಮ ಮೇಜಿನ ಮೇಲೆ ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಇಡಬೇಕು. ಇವುಗಳನ್ನು ಇಟ್ಟರೆ ಮಾತ್ರ ಊಟ ಬಡಿಸಲಾಗುತ್ತದೆ.

ಬಳಿಕ ಕುಟುಂಬ ಬಹಳ ಸಂತೋಷದಿಂದ ಊಟದ ಸಮಯವನ್ನು ಕಳೆಯುತ್ತದೆ. ಈ ವಿಡಿಯೋ ಹಲವಾರು ವೀಕ್ಷಣೆಗಳು ಮತ್ತು ಟನ್ ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಬಹಳ ಮಂದಿ ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಇನ್ನು ಕೆಲವರು ಮಕ್ಕಳಿಗೆ ಇಷ್ಟು ಬೇಗ ಸೋಶಿಯಲ್ ಮೀಡಿಯಾದಲ್ಲಿ ಕಳೆಯಲು ಬಿಡಬಾರದು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...