ಕೆಲವೊಮ್ಮೆ ರಸ್ತೆಯ ಮೇಲೆ ಜನರು ಮಾಡುವ ಸರ್ಕಸ್ ಹೇಗಿರುತ್ತದೆ ಎಂದರೆ ಅದನ್ನು ನಂಬುವುದು ಅಸಾಧ್ಯವಾಗಿ ಬಿಡುತ್ತದೆ, ಕೆಲವೊಮ್ಮೆ ಕೆಲವೊಂದು ಘಟನೆಗಳು ವಿಲಕ್ಷಣ ಎನಿಸುತ್ತವೆ. ಅಂಥದ್ದೇ ಒಂದು ಘಟನೆ ಇದೀಗ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಬೈಕ್ ಓಡಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಬೈಕ್‌ನಲ್ಲಿ ಐದಾರು ಮಂದಿ ಜನರು ಅಸಾಧ್ಯ ಎಂಬಂತೆ ಕುಳಿತುಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲವೇನೋ. ಮಕ್ಕಳು ಸೇರಿದಂತೆ ಇನ್ನೂ ಐದಾರು ಮಂದಿ ಕಾಣಸಿಗುತ್ತಾರೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ, ಬೈಕ್‌ನಲ್ಲಿ ಎರಡು ನಾಯಿಗಳು ಮತ್ತು ಎರಡು ಕೋಳಿಗಳನ್ನೂ ಈ ವಿಡಿಯೋದಲ್ಲಿ ನೋಡಬಹುದು.
ಅಬ್ಬಬ್ಬಾ ಎನ್ನುವ ಈ ವಿಡಿಯೋ ಇದಾಗಲೇ 2.58 ಲಕ್ಷ ವ್ಯೂಸ್ಗಳನ್ನು ಕಂಡಿದೆ. ಸ್ವಲ್ಪ ಎಡವಟ್ಟಾದರೂ ಜನರ ಜೀವಕ್ಕೆ ಹೇಗೆ ಪ್ರಾಣ ತಂದೊಡ್ಡಬಲ್ಲುದು ಎಂದು ಹಲವರು ಇದಕ್ಕೆ ಕಿಡಿ ಕಾರಿದ್ದರೆ, ಕೆಲವರು ತಮಾಷೆಯ ಕಮೆಂಟ್ ಮಾಡಿದ್ದಾರೆ.