ವಾಹನವನ್ನು ನಿಲುಗಡೆ ಮಾಡುವಾಗ, ಸ್ವಲ್ಪ ಕುಶಲತೆ ಅಗತ್ಯವಿದೆ. ಆದ್ದರಿಂದ ವಾಹನ ಚಾಲಕರು ಪಾರ್ಕಿಂಗ್ ಮಾಡುವಾಗ ಸದಾ ಎಚ್ಚರವಾಗಿರುತ್ತಾರೆ.
ಒಂದು ವೇಳೆ ವಾಹನವು 18 ಚಕ್ರದ ಟ್ರಕ್ ಆಗಿದ್ದರೆ ಪಾರ್ಕಿಂಗ್ ಎಷ್ಟು ಕಷ್ಟ ಎಂದು ಊಹಿಸಿಕೊಳ್ಳುವುದೇ ಕಷ್ಟ. ಇದಕ್ಕೆ ಹೆಚ್ಚಿನ ಎಚ್ಚರಿಕೆ ಮತ್ತು ಕೌಶಲ ಬೇಕಾಗುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಇಂಥ ಟ್ರಕ್ ಚಾಲಕನ ಅಸಾಧಾರಣ ಪಾರ್ಕಿಂಗ್ ಕೌಶಲ ಪ್ರದರ್ಶಿಸಲಾಗಿದೆ.
ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಚಾಲಕನ ಪಾರ್ಕಿಂಗ್ ಕೌಶಲವನ್ನು ನೋಡಬಹುದಾಗಿದೆ. ಚಾಲಕನು ಕ್ಯಾಬಿನ್‌ನೊಳಗೆ ಹತ್ತದೆ ಮತ್ತು ವಾಹನದ ಪಕ್ಕದಲ್ಲಿ ನಡೆಯುವಾಗ ಸ್ಟೀರಿಂಗ್ ಅನ್ನು ನಿಯಂತ್ರಿಸದೆ ಬೃಹತ್ ಟ್ರಕ್ ಅನ್ನು ನಿಲ್ಲಿಸುವುದನ್ನು ವಿಡಿಯೋದಲ್ಲಿ ನೋಡಬಹುದು.
ಈ ಚಾಲಕನ ಚಾಲನಾ ಕೌಶಲ ಎಲ್ಲರನ್ನೂ ಬೆರಗುಗೊಳಿಸುತ್ತಿದೆ. ಈ ಕೌಶಲಕ್ಕೆ ಇದಾಗಲೇ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ,
https://twitter.com/Rondell_89/status/1595454596117397507?ref_src=twsrc%5Etfw%7Ctwcamp%5Etweetembed%7Ctwterm%5E1595454596117397507%7Ctwgr%5Edecc405037335ca0214de895223639c4be004313%7Ctwcon%5Es1_&ref_url=https%3A%2F%2Fnews.abplive.com%2Ftrending%2Fviral-video-shows-man-parking-18-wheeler-truck-by-controlling-steering-wheel-from-outside-1565877