ಸಾಮಾನ್ಯವಾದವುಗಳಿಗಿಂತ ದೊಡ್ಡದಾದ ಹಾಗೂ ಬಲವಾದ ಪೋಗೋ ಸ್ಟಿಕ್ ಸಹಾಯದಿಂದ ವ್ಯಕ್ತಿಯೊಬ್ಬರು ಹೊಸ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಪೋಗೊ ಸ್ಟಿಕ್ ಮೂಲಕ ಐದು ಕಾರುಗಳ ಮೇಲಿನಿಂದ ಟೈಲರ್ ಫಿಲಿಪ್ಸ್ ಜಿಗಿದಿದ್ದು, ಹೊಸ ದಾಖಲೆಗೆ ಪಾತ್ರರಾಗಿದ್ದಾರೆ.
ಸ್ಟ್ರಾಟ್ಫೋರ್ಡ್ನ 21 ವರ್ಷ ವಯಸ್ಸಿನ ಟೈಲರ್ ಫಿಲಿಪ್ಸ್ ಈ ಸಾಧನೆ ಮಾಡಿದ್ದಾರೆ. ಸತತ ಐದು ಕಾರುಗಳ ಮೇಲಿಂದ ಪೊಗೊ ಸ್ಟಿಕ್ ಮೂಲಕ ಜಂಪ್ ಮಾಡಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಫಿಲಿಪ್ ಹಾರಿದ ಕಾರುಗಳು ಸುಮಾರು 2 ಮೀಟರ್ ಎತ್ತರ ಮತ್ತು 1.6 ಮೀಟರ್ ಅಗಲವಿದೆ. ಈ ಹಿಂದಿನ ತನ್ನ ತಂಡದ ಸಹ ಆಟಗಾರ ಡಾಲ್ಟನ್ ಸ್ಮಿತ್ ಅವರ ದಾಖಲೆಯನ್ನು ಫಿಲಿಪ್ಸ್ ಮುರಿದಿದ್ದಾರೆ.
ಪೊಗೊ ಸ್ಟಿಕ್ ಎಂಬುದು ಕಡಿಮೆ ಎತ್ತರ ಅಥವಾ ದೂರವನ್ನು ಜಿಗಿಯಲು ಬಳಸುವ ಸಾಧನವಾಗಿದೆ. ಇದು ಉದ್ದವಾದ, ಸ್ಪ್ರಿಂಗ್-ಲೋಡೆಡ್ ಧ್ರುವವನ್ನು ಒಳಗೊಂಡಿರುತ್ತದೆ ಮತ್ತು ಮೇಲ್ಭಾಗದಲ್ಲಿ ಹ್ಯಾಂಡಲ್ ಅನ್ನು ಹೊಂದಿರುತ್ತದೆ ಹಾಗೂ ಕೆಳಭಾಗದಲ್ಲಿ ವ್ಯಕ್ತಿಯ ಪಾದಗಳನ್ನು ಹಿಡಿದಿಟ್ಟುಕೊಂಡಿರುತ್ತದೆ.
ಇದನ್ನು ಹೆಚ್ಚಾಗಿ ಮಕ್ಕಳ ಆಟಿಕೆಯಾಗಿ ಮಾರಾಟ ಮಾಡುತ್ತಾರೆಯಾದರೂ, ಅನೇಕ ಸ್ಟಂಟ್ ವೃತ್ತಿಪರರು ಇದನ್ನು ಚಮತ್ಕಾರಿಕ ಆಟಗಳು ಹಾಗೂ ದಾಖಲೆಗಳಿಗಾಗಿ ಬಳಸುತ್ತಾರೆ.
https://youtu.be/ant_nyS7Og8