ವಧು ಮತ್ತು ವರರು ವೇದಿಕೆಯ ಮೇಲೆ ನಿಂತು ವಿಧಿವಿಧಾನಗಳನ್ನು ಪೂರೈಸುತ್ತಿರುವ ಸಮಯದಲ್ಲಿ ಕೆಳಗಡೆ ಭಾರಿ ಗಲಾಟೆ, ಹೊಡೆದಾಟ ಆಗುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಮದುಮಗಳು ಮದುಮಗನಿಗೆ ಆರತಿ ಮಾಡುತ್ತಿದ್ದಾಗ ಕೆಳಗೆ ಜಗಳ ಆಗುತ್ತಿದ್ದು, ವಧು-ವರ ಶಾಕ್ ಆಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಕೆಳಗೆ ಗಲಾಟೆಯಾಗುತ್ತಿದ್ದರೂ ವಧು, ವರನಿಗೆ ಮೊದಲು ಆರತಿ ಪೂರ್ಣಗೊಳಿಸುತ್ತಾಳೆ. ನಂತರ ಇಬ್ಬರೂ ಸೇರಿ ಗಾಬರಿಯಿಂದ ಜಗಳವನ್ನು ನೋಡುತ್ತಾರೆ. ಇಡೀ ಘಟನೆಯನ್ನು ಚಿತ್ರೀಕರಿಸಲು ಡ್ರೋನ್ ಕೂಡ ಹಾರಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಅಗಿದೆ.
ಗಲಾಟೆಗೆ ಕಾರಣಗಳೇನು ಎನ್ನುವುದು ತಿಳಿದಿಲ್ಲ. ಆದರೆ ಈ ವಿಡಿಯೋ ನೋಡುತ್ತಿದ್ದಂತೆಯೇ ಜನರು ತಮ್ಮದೇ ಆದ ರೀತಿಯಲ್ಲಿ ಥರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಬಹುಶಃ ಕೊಟ್ಟ ವರದಕ್ಷಿಣೆ ಸಾಕಾಗಿರಲಿಕ್ಕಿಲ್ಲ ಎಂದು ಕೆಲವರು ವಾದಿಸುತ್ತಿದ್ದರೆ, ಮದುವೆಯ ಊಟ ಚೆನ್ನಾಗಿಲ್ಲ ಎಂದು ಗಲಾಟೆ ಶುರುವಾಗಿರಬಹುದು ಎಂದು ಇನ್ನು ಕೆಲವರು ಊಹಿಸಿದ್ದಾರೆ. ವಧುವೋ, ವರನೋ ತಮಗೆ ಸೇರಬೇಕಾದವರು ಎಂದು ಗಲಾಟೆ ಶುರುವಾಗಿರಬಹುದು ಎಂದು ಕೆಲವರು ತಮಾಷೆಯ ಕಮೆಂಟ್ ಕೂಡ ಹಾಕಿದ್ದಾರೆ. ಒಟ್ಟಿನಲ್ಲಿ ಜನರಿಗೆ ಈ ಗಲಾಟೆ ಮನರಂಜನೆ ಒದಗಿಸುತ್ತಿದೆ.