alex Certify ಪಾಕ್ ವಿರುದ್ಧ ಟೀಂ ಇಂಡಿಯಾ ಜಯಭೇರಿ ಬಾರಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಂದ ಮೊಳಗಿತು ʼಚಕ್ ದೇ ಇಂಡಿಯಾʼ ಹಾಡು; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ವಿರುದ್ಧ ಟೀಂ ಇಂಡಿಯಾ ಜಯಭೇರಿ ಬಾರಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಂದ ಮೊಳಗಿತು ʼಚಕ್ ದೇ ಇಂಡಿಯಾʼ ಹಾಡು; ವಿಡಿಯೋ ವೈರಲ್

ಭಾನುವಾರ, ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 5 ವಿಕೆಟ್‌ಗಳ ಜಯಭೇರಿ ಸಾಧಿಸಿದಾಗ, ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಚಕ್ ದೇ ಇಂಡಿಯಾ ಹಾಡನ್ನು ಒಕ್ಕೊರಳಿನಿಂದ ಹಾಡುತ್ತಾ ಸಂಭ್ರಮಿಸಿದ್ದಾರೆ. ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಚಕ್ ದೇ ಇಂಡಿಯಾ ಎಂದು ಹಾಡುತ್ತಿರುವ ವಿಡಿಯೋ ಇದೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

ಧ್ರುವ್ ರಾಥಿ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಟೀಮ್ ಇಂಡಿಯಾದ ನೀಲಿ ಜೆರ್ಸಿಯನ್ನು ಧರಿಸಿರುವ ಅಭಿಮಾನಿಗಳಿಂದ ತುಂಬಿದ ಕ್ರೀಡಾಂಗಣದ ನೋಟವನ್ನು ನೋಡಬಹುದು. ಜನರು ಚಕ್ ದೇ ಇಂಡಿಯಾ ಹಾಡನ್ನು ಒಕ್ಕೊರಲಿನ ದನಿಯಲ್ಲಿ ಹಾಡಿದ್ದಾರೆ. ಕೊನೆಯಲ್ಲಿ, ಭಾರತ 5 ವಿಕೆಟ್‌ಗಳಿಂದ ಗೆದ್ದಿತು ಎಂದು ಸ್ಕೋರ್‌ಬೋರ್ಡ್ ಮಿನುಗುತ್ತಿದ್ದಂತೆ, ಇನ್ನೂ ಗಟ್ಟಿಯಾದ ದನಿಯಲ್ಲಿ ಕೂಗಿದ್ದಾರೆ. ಇಡೀ ಕ್ರೀಡಾಂಗಣ ತುಂಬಾ ಚಕ್ ದೇ ಇಂಡಿಯಾ ಘೋಷಣೆ ಮೊಳಗಿದೆ.

ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...