alex Certify 1927ರ ಭಾರತೀಯ ವೈದ್ಯರ ಪಾಸ್​ಪೋರ್ಟ್…! ಅತ್ಯಮೂಲ್ಯ ಆಸ್ತಿ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1927ರ ಭಾರತೀಯ ವೈದ್ಯರ ಪಾಸ್​ಪೋರ್ಟ್…! ಅತ್ಯಮೂಲ್ಯ ಆಸ್ತಿ ಎಂದ ನೆಟ್ಟಿಗರು

ಮುಂಬೈ: ನಮ್ಮಲ್ಲಿ ಹೆಚ್ಚಿನವರು ಭಾರತದ ಇತಿಹಾಸದ ಬಗ್ಗೆ ಪುಸ್ತಕಗಳು, ಶಾಲಾ ಪಠ್ಯಪುಸ್ತಕಗಳು ಮತ್ತು ಇತರ ವೆಬ್ ಆರ್ಕೈವ್‌ಗಳಲ್ಲಿ ಓದಿದ್ದೇವೆ. ಆ ಯುಗಕ್ಕೆ ಸೇರಿದ ಆಸ್ತಿಗಳನ್ನು ಅಮೂಲ್ಯವಾದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಇಂಥದ್ದೇ ಒಂದು ಅಮೂಲ್ಯವಾಗಿರುವ ಆಸ್ತಿಯೊಂದು ಇದೀಗ ಬೆಳಕಿಗೆ ಬಂದಿದೆ.

ಪಾಸ್‌ಪೋರ್ಟ್ ಸಂಗ್ರಹಕಾರರೊಬ್ಬರು 1927 ರ ಬ್ರಿಟಿಷ್ ಇಂಡಿಯನ್ ಪಾಸ್‌ಪೋರ್ಟ್‌ನ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ. ಮುಂಬೈನ (ಆಗ ಬಾಂಬೆ ಎಂದು ಕರೆಯಲ್ಪಟ್ಟ) ವೈದ್ಯರೊಬ್ಬರ ಪಾಸ್‌ಪೋರ್ಟ್ ಇದಾಗಿದೆ. “1920 ರ ದಶಕದ ಅಂತ್ಯದಲ್ಲಿ ಯುರೋಪ್​ಗೆ ಪ್ರಯಾಣಿಸಿದ ಅಂದಿನ ಬಾಂಬೆಯ ಪ್ರಸಿದ್ಧ ವೈದ್ಯರಿಗೆ 1927-32 ಬ್ರಿಟಿಷ್ ವಸಾಹತುಶಾಹಿ ಭಾರತೀಯ ಪಾಸ್​ಪೋರ್ಟ್​ ನೀಡಲಾಗಿದೆ” ಎಂಬ ಶೀರ್ಷಿಕೆ ನೀಡಲಾಗಿದೆ.

ಡಾ. ಬಾಲಾಭಾಯಿ ನಾನಾವತಿ ಎನ್ನುವವರ ಈ ಪಾಸ್​ಪೋರ್ಟ್​, ಸ್ವಲ್ಪ ಸವೆದಿದ್ದು, ಆಗಿನ ಬ್ರಿಟಿಷ್ ರಾಜನ ಸಹಿ ಕಾಣಬಹುದಾಗಿದೆ. ರಾಯಲ್ ನೀಲಿ ಬಣ್ಣದ ಪಾಸ್​ಪೋರ್ಟ್​ ಇದಾಗಿದ್ದು, ಇದನ್ನು 1932 ರವರೆಗೆ ಬಳಸಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಡಾ. ನಾನಾವತಿ ಪ್ರಯಾಣಿಸಿದ ದೇಶಗಳ ಜೊತೆಗೆ ಮಾಲೀಕರ ಭಾವಚಿತ್ರ ಮತ್ತು ಸಹಿಯನ್ನು ಸಹ ಇದರಲ್ಲಿ ಕಾಣಬಹುದು. ಅಂದಹಾಗೆ ಮುಂಬೈನಲ್ಲಿ ಡಾ. ನಾನಾವತಿ ಅವರ ಹೆಸರಿನಲ್ಲಿ ವಿವಿಧ ಆಸ್ಪತ್ರೆಗಳಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...