alex Certify ಕುಟುಂಬ ಊಟಕ್ಕೆ ಕುಳಿತ್ತಿದ್ದಾಗಲೇ ನಡೆದಿದೆ ಆಕಸ್ಮಿಕ ಘಟನೆ; ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬ ಊಟಕ್ಕೆ ಕುಳಿತ್ತಿದ್ದಾಗಲೇ ನಡೆದಿದೆ ಆಕಸ್ಮಿಕ ಘಟನೆ; ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರು

ಮನೆಯಲ್ಲಿ ಕುಟುಂಬ ಊಟ ಮಾಡುತ್ತಾ ಕುಳಿತಿದ್ದ ಸಂದರ್ಭದಲ್ಲಿ ಸೀಲಿಂಗ್​ ಫ್ಯಾನ್​ ಅವರ ಮೇಲೆ ಬಿದ್ದ ಪ್ರಸಂಗ ನಡೆದಿದೆ. ಈ ಘಟನೆ ಕ್ಯಾಮರಾದಲ್ಲೂ ಸೆರೆಯಾಗಿದೆ.

ಐಪಿಎಸ್​ ಅಧಿಕಾರಿ ದೀಪಾಂಶು ಕಾಬ್ರಾ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಕ್ಲಿಪ್​ ಖಂಡಿತವಾಗಿ ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ. ಈ ವಿಡಿಯೋ ಮೂಲತಃ ಸ್ವಲ್ಪ ಸಮಯದ ಹಿಂದೆ ಟಿಕ್​ ಟಾಕ್​ ಮೂಲಕ ವೈರಲ್​ ಆಗಿತ್ತು.

ಆರು ಜನರ ಕುಟುಂಬವು ತಮ್ಮ ಮನೆಯ ಕೋಣೆಯಲ್ಲಿ ಚಾಪೆ ಮೇಲೆ ಕುಳಿತು ಒಟ್ಟಿಗೆ ಊಟ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದ್ದಕ್ಕಿದ್ದಂತೆ, ಹುಡುಗ ಮತ್ತು ತಂದೆಯ ನಡುವೆ ಸೀಲಿಂಗ್​ ಫ್ಯಾನ್ ಬೀಳುತ್ತದೆ ಮತ್ತು ಎಲ್ಲರೂ ಆತಂಕದಿಂದ ಹೌಹಾರಿದ್ದಾರೆ.

ಫ್ಯಾನ್​ ಹುಡುಗನ ತಲೆ ತಪ್ಪಿ ಅವನ ಕಾಲಿನ ಮೇಲೆ ಬೀಳುತ್ತದೆ. ಫ್ಯಾನ್​ ತಲೆಯ ಮೇಲೆ ಬಿದ್ದರೆ ಮಾರಣಾಂತಿಕವಾಗುವ ಸಾಧ್ಯತೆ ಇತ್ತು. ತಾಯಿ ಹುಡುಗನನ್ನು ಸಮಾಧಾನಪಡಿಸುವುದು ಮತ್ತು ಅವನ ತಲೆ ಉಜ್ಜುವುದನ್ನು ವಿಡಿಯೋದಲ್ಲಿ ನೋಡಬಹುದು.

ವಿಡಿಯೋ ಗಮನಿಸಿರುವ ನೆಟ್ಟಿಗರು ಪ್ರಾಣಾಪಾಯ ತಪ್ಪಿದ್ದಕ್ಕೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್​ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...