alex Certify ʼಕಚ್ಚಾ ಬದಾಮ್ʼ ಹಾಡಿಗೆ ಬೀದಿಯಲ್ಲಿ ಕುಣಿದ ಶಾಲಾ ಮಕ್ಕಳು…! ಅದ್ಬುತವಾಗಿದೆ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಚ್ಚಾ ಬದಾಮ್ʼ ಹಾಡಿಗೆ ಬೀದಿಯಲ್ಲಿ ಕುಣಿದ ಶಾಲಾ ಮಕ್ಕಳು…! ಅದ್ಬುತವಾಗಿದೆ ಎಂದ ನೆಟ್ಟಿಗರು

ಪೂರ್ವಸಿದ್ಧತೆ ಇಲ್ಲದೆ ಕಚ್ಚಾ ಬದಾಮ್ ಹಾಡಿಗೆ ಬೀದಿಯಲ್ಲಿ ನರ್ತಿಸುವ ಸವಾಲು ಸ್ವೀಕರಿಸಿದ ವಿದ್ಯಾರ್ಥಿಗಳ ಗುಂಪಿನ ವಿಡಿಯೋ ಒಂದು ವೈರಲ್ ಆಗಿದೆ.

ಬಂಗಾಲಿ ಹಾಡು ಕಚ್ಚಾ ಬದಾಮ್ ತುಂಬ ದೊಡ್ಡ ಟ್ರೆಂಡ್ ಮತ್ತು ಸೆನ್ಸೇಶನ್ ಸೃಷ್ಟಿಸಿದೆ. ಹಲವು ತಿಂಗಳ ಬಳಿಕ ಇನ್ನೂ ಸಾಮಾಜಿಕ ಜಾಲತಾಣವನ್ನು ಆಳುತ್ತಿದೆ.

ಶಾಲೆಗೆ ಹೋಗುವ ದಾರಿಯಲ್ಲಿ ವಿದ್ಯಾರ್ಥಿಗಳು ಯಾವುದೇ ಸಿದ್ಧತೆ ಇಲ್ಲದೆ ಈ ಹಾಡಿಗೆ ಮಾಡಿದ ನೃತ್ಯವು ಈಗ ಭಾರೀ ಆಕರ್ಷಣೆ ಸೃಷ್ಟಿಸಿದೆ. ಮುಂದೆ ಸಾಗುತ್ತಿದ್ದ ಒಬ್ಬ ಹುಡುಗ ನರ್ತಿಸಲು ಆರಂಭಿಸುತ್ತಿದ್ದಂತೆಯೇ ಆತನ ಸಂಗಡಿಗರೂ ಜತೆಯಾಗಿ ಹೆಜ್ಜೆಹಾಕಿದ್ದಾರೆ.

ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಚರ್ಚೆ

ಮೋಜಿನ ಈ ನೃತ್ಯವನ್ನು ಜನರು ಮೆಚ್ಚಿಕೊಂಡಿದ್ದಾರೆ. ನಗುವ ಇಮೋಜಿಗಳೊಂದಿಗೆ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಹುಡುಗಿಯರಿಗಿಂತಲೂ ಹೆಚ್ಚಾಗಿ ಮಾಡುತ್ತಿದ್ದೀರಿ ಎಂದು ಒಬ್ಬರು ತಮಾಷೆಯಾಗಿ ಹೇಳಿದರೆ, ಅಲ್ಟ್ರಾ ಪ್ರೋ ಮ್ಯಾಕ್ಸ್ ಕ್ರೇಜ್ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಪರೀಕ್ಷೆಯಲ್ಲಿ ಪಾಸಾದ್ರಾ ಎಂದು ಮಗದೊಬ್ಬರು ಪ್ರಶ್ನಿಸಿದ್ದಾರೆ. ನಾಲ್ಕನೆಯವರೊಬ್ಬರು ಶಹಬ್ಬಾಸ್ ಮಕ್ಕಳೆ, ತುಂಬ ಚೆನ್ನಾಗಿದೆ ಎಂದು ಪ್ರೀತಿ ತೋರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...